ಎಂದು ಸಾಮಾನ್ಯವಾಗಿ ಸಂಕ್ಷಿಪ್ತಗೊಳ್ಳುವ ಬಿಸ್ಫೆನಾಲ್ ಎ ಎಂಬುದು ಎರಡು ಫೀನಾಲ್ ಕಾರ್ಯಾತ್ಮಕ ಗುಂಪುಗಳೊಂದಿಗಿರುವ ಒಂದು ಜೈವಿಕ ಸಂಯುಕ್ತವಾಗಿದೆ. ಇದನ್ನು ಇತರ ಬಳಕೆಗಳೊಂದಿಗೆ ಪಾಲಿಕಾರ್ಬೋನೆಟ್ ಪ್ಲ್ಯಾಸ್ಟಿಕ್ ಹಾಗು ಇಪಾಕ್ಸಿ ರಾಸಾಯನಿಕ ರಾಳವನ್ನು ತಯಾರಿಸಲು ಬಳಸಲಾಗುತ್ತದೆ. ೧೯೩೦ರ ಮಧ್ಯಭಾಗದಿಂದಲೂ ಈಸ್ಟ್ರಜೆನಿಕ್(ಮದಜನಕ)ವೆಂದು ಪರಿಚಿತವಾಗಿತ್ತು. ಅನೇಕ ಸರ್ಕಾರಗಳು ಅದರ ಸುರಕ್ಷತೆಯನ್ನು ಪ್ರಶ್ನಿಸಿ ವರದಿಗಳನ್ನು ನೀಡಿದ್ದರಿಂದ, ಗ್ರಾಹಕ ಪದಾರ್ಥಗಳಲ್ಲಿ ಬಿಸ್ಫೆನಾಲ್ ಎ ನ ಬಳಕೆಯ ಬಗ್ಗೆ ಕಳವಳಗಳು ೨೦೦೮ರಲ್ಲಿ ಸುದ್ದಿ ಮಾಧ್ಯಮದಲ್ಲಿ ನಿರಂತರವಾಗಿ ವರದಿಯಾದವು. ಇದರಿಂದ ತಮ್ಮ ಕಪಾಟುಗಳಲ್ಲಿ ಇದನ್ನು ಹೊಂದಿದ್ದಂತಹ ಕೆಲವು ವ್ಯಾಪಾರಿಗಳು ಇದನ್ನು ಹೊರಹಾಕುವಂತಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ () ೨೦೧೦ರಲ್ಲಿ ನೀಡಿದ ಒಂದು ವರದಿಯು, ಇದಕ್ಕೆ ಭ್ರೂಣ, ಶಿಶುಗಳು ಹಾಗು ಚಿಕ್ಕ ಮಕ್ಕಳು ಒಡ್ಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕಳವಳಗಳನ್ನು ಹುಟ್ಟುಹಾಕಿತು. ಸೆಪ್ಟೆಂಬರ್ ೨೦೧೦ರಲ್ಲಿ, ಕೆನಡಾ, ಒಂದು ವಿಷಯುಕ್ತ ಪದಾರ್ಥವೆಂದು ಘೋಷಿಸಿದ ಮೊದಲ ರಾಷ್ಟ್ರವಾಯಿತು. ಯುರೋಪಿಯನ್ ಒಕ್ಕೂಟ ಹಾಗು ಕೆನಡಾದಲ್ಲಿ, ಮಕ್ಕಳು ಹಾಲು ಕುಡಿಯುವ ಬಾಟಲುಗಳಲ್ಲಿ BPAಯ ಬಳಕೆಯನ್ನು ನಿಷೇಧಿಸಲಾಯಿತು. == ಉತ್ಪಾದನೆ == ೧೯೮೦ರ ದಶಕದಲ್ಲಿ ಈ ಸಂಯುಕ್ತದ ಉತ್ಪಾದನೆಯು ವಿಶ್ವದಾದ್ಯಂತ ಒಂದು ದಶಲಕ್ಷ ಟನ್ ಗಳಷ್ಟಿತ್ತು, ಹಾಗು ೨೦೦೯ರಲ್ಲಿ ಇದರ ಉತ್ಪಾದನೆಯು ೨.೨ ದಶಲಕ್ಷ ಟನ್ ಗಳಿಗೆ ಏರಿತು. ೨೦೦೩ರಲ್ಲಿ, ..ನಲ್ಲಿ ಇದರ ಬಳಕೆಯು ೮೫೬,೦೦೦ ಟನ್ ಗಳಷ್ಟಿದ್ದು, ಇದರಲ್ಲಿ ೭೨%ನಷ್ಟನ್ನು ಪಾಲಿಕಾರ್ಬೋನೆಟ್ ಪ್ಲ್ಯಾಸ್ಟಿಕ್ ತಯಾರಿಕೆಗೆ ಹಾಗು ೨೧%ನಷ್ಟು ಇಪಾಕ್ಸಿ ರಾಸಾಯನಿಕ ರಾಳದ ತಯಾರಿಕೆಗೆ ಬಳಸಿಕೊಳ್ಳಲಾಯಿತು. USನಲ್ಲಿ ತಯಾರಿಕೆಯಾದ ೫%ಗೂ ಕಡಿಮೆ BPAಯನ್ನು ಆಹಾರ ಸಂಬಂಧಿ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಬಿಸ್ಫೆನಾಲ್ ಎ ಯನ್ನು ಮೊದಲ ಬಾರಿಗೆ ೧೮೯೧ರಲ್ಲಿ ರಷ್ಯನ್ ರಸಾಯನ ವಿಜ್ಞಾನಿ .. ಡಿಯನಿನ್ ಸಂಶ್ಲೇಷಿಸಿದರು. ಈ ಸಂಯುಕ್ತವನ್ನು, ಎರಡು ಸಮಾನ ಫೀನಾಲ್ ಗಳೊಂದಿಗೆ ಅಸಿಟೋನ್ ನನ್ನು(ಈ ರೀತಿಯಾಗಿ ಎ ಎಂಬ ಉತ್ತರ ಪ್ರತ್ಯಯವು ಸೇರ್ಪಟ್ಟಿದೆ) ಸಲಿಲೀಕರಣ ಮಾಡುವ ಮೂಲಕ ಸಂಶ್ಲೇಷಿಸಲಾಗುತ್ತದೆ. ಈ ಕ್ರಿಯೆಯು ಒಂದು ಬಲವಾದ ಆಸಿಡ್ ನಿಂದ ವೇಗವರ್ಧನೆಯಾಗುತ್ತದೆ, ಉದಾಹರಣೆಗೆ ಹೈಡ್ರೋಕ್ಲೋರಿಕ್ ಆಮ್ಲ() ಅಥವಾ ಒಂದು ಸಲ್ಫೋನೇಟೆಡ್ ಪಾಲಿಸ್ಟೆರಿನ್ ರಾಸಾಯನಿಕ ರಾಳ. ಕೈಗಾರಿಕೆಗಳಲ್ಲಿ, ದೊಡ್ಡ ಪ್ರಮಾಣದಲ್ಲಿ ಫೀನಾಲ್ ನ್ನು ಸಂಪೂರ್ಣ ಸಲಿಲೀಕರಣ ಖಾತರಿಗೆ ಬಳಸಲಾಗುತ್ತದೆ; ಕುಮೆನ್ ಪ್ರಕ್ರಿಯೆಯ ಪದಾರ್ಥ ಮಿಶ್ರಣವನ್ನು(ಅಸಿಟೋನ್ ಹಾಗು ಫೀನಾಲ್) ಆರಂಭಿಕ ಪದಾರ್ಥವಾಗಿಯೂ ಸಹ ಬಳಕೆ ಮಾಡಬಹುದು: ಒಂದು ದೊಡ್ಡ ಸಂಖ್ಯೆಯ ಕೆಟೋನ್ ಗಳು ಸದೃಶವಾದ ಸಲಿಲೀಕರಣ ಪ್ರತಿಕ್ರಿಯೆಗಳಿಗೆ ಒಳಗಾಗುತ್ತವೆ. BPAಯನ್ನು ವಾಣಿಜ್ಯಕವಾಗಿ ತಯಾರು ಮಾಡುವಾಗ ಬಟ್ಟಿ ಇಳಿಸುವಿಕೆ ಅಗತ್ಯವಿರುತ್ತದೆ - ಅಧಿಕವಾದ ನಿರ್ವಾತದಲ್ಲಿ ಹಲವು ರಾಳೀಯ ಉಪ ಉತ್ಪನ್ನದಿಂದ ತೆಗೆಯುವುದು ಅಥವಾ ಬಟ್ಟಿ ಇಳಿಸುವಿಕೆ ನಂತರ ಹೆಚ್ಚುವರಿ ಫೀನಾಲ್ ಬಳಸಿ ವಿಲೇಯಕ ಆಧಾರಿತ ತೆಗೆಯುವುದು. == ಉಪಯೋಗ == ಬಿಸ್ಫೆನಾಲ್ ಎ ಯನ್ನು ಮುಖ್ಯವಾಗಿ ಪ್ಲ್ಯಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುತ್ತದೆ, ಹಾಗು ಬಿಸ್ಫೆನಾಲ್ ಎ ಆಧಾರಿತ ಪ್ಲ್ಯಾಸ್ಟಿಕ್ ಗಳು ೧೯೫೭ರಿಂದಲೂ ವಾಣಿಜ್ಯಕವಾಗಿ ಬಳಕೆಯಲ್ಲಿದೆ. ಇದರ ತಯಾರಕರು ಕಡೆ ಪಕ್ಷ ಎಂಟು ಶತಕೋಟಿ ಪೌಂಡ್ ಗಳಷ್ಟು BPAಯನ್ನು ಬಳಸುತ್ತಾರೆ. ಇದು ಇಪಾಕ್ಸಿ ರಾಸಾಯನಿಕ ರಾಳಗಳ ತಯಾರಿಕೆಯಲ್ಲಿ ಪ್ರಮುಖ ಮಾನೊಮರ್ ಆಗಿದೆ ಹಾಗು ಇದು ಪಾಲಿಕಾರ್ಬೋನೆಟ್ ಪ್ಲ್ಯಾಸ್ಟಿಕ್ ನ ಅತ್ಯಂತ ಸಾಮಾನ್ಯ ರೂಪವಾಗಿದೆ. ಪಾಲಿಕಾರ್ಬೋನೆಟ್ ನ್ನು ನೀಡುವ ಒಟ್ಟಾರೆ ಪ್ರತಿಕ್ರಿಯೆಯನ್ನು ಈ ರೀತಿಯಾಗಿ ಬರೆಯಬಹುದು: ಪಾರದರ್ಶಕವಾದ ಹಾಗು ಬಹುತೇಕವಾಗಿ ಒಡೆಯದ ಪಾಲಿಕಾರ್ಬೋನೆಟ್ ಪ್ಲ್ಯಾಸ್ಟಿಕ್ ನ್ನು ಹಸುಳೆಗಳ ಹಾಗು ನೀರಿನ ಬಾಟಲುಗಳು, ಕ್ರೀಡಾ ಸಾಧನಗಳು, ವೈದ್ಯಕೀಯ ಹಾಗು ದಂತ ಉಪಕರಣಗಳು, ಹಲ್ಲಿನ ಭರ್ತಿಸಾಮಗ್ರಿಯಾಗಿ ಹಾಗು ಸ್ತಂಭಕ ಹಾಗು ಕಣ್ಣಿನ ಗ್ಲಾಸ್ ಲೆನ್ಸ್ ಗಳು, CDಗಳು ಹಾಗು DVDsಗಳು, ಹಾಗು ಮನೆಬಳಕೆಯ ವಿದ್ಯುತ್ ಉಪಕರಣಗಳನ್ನು ಒಳಗೊಂಡಂತೆ ಹಲವಾರು ಸಾಮಾನ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. BPAಯನ್ನು ಪಾಲಿಸಲ್ಫೋನ್ ಹಾಗು ಪಾಲಿಈಥರ್ ಕೆಟೋನ್ ಗಳನ್ನು ಸಂಶ್ಲೇಷಿಸುವಾಗ,ಕೆಲವೊಂದು ಪ್ಲಾಸ್ಟಿಕಾರಕಗಳಲ್ಲಿ ಒಂದು ಆಕ್ಸಿಡೀಕಾರಕ ಪ್ರತಿರೋಧಿಯಾಗಿ, ಹಾಗು PVCಯಲ್ಲಿ ಪಾಲಿಮರೀಕರಣ ನಿರೋಧಕವಾಗಿಯೂ ಸಹ ಬಳಸಲಾಗುತ್ತದೆ. ಬಿಸ್ಫೆನಾಲ್ ಎ ಯನ್ನು ಹೊಂದಿರುವ ಇಪಾಕ್ಸಿ ರಾಸಾಯನಿಕ ರಾಳಗಳನ್ನು ಬಹುತೇಕವಾಗಿ ಎಲ್ಲ ಆಹಾರ ಹಾಗು ಪಾನೀಯ ಕ್ಯಾನ್ ಗಳ ಒಳಭಾಗದ ಲೇಪನವಾಗಿ ಬಳಸಲಾಗುತ್ತದೆ. ಆದಾಗ್ಯೂ, ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮಗಳಿಗೆ ಸಂಬಂಧಿಸಿದಂತೆ, ಜಪಾನಿನಲ್ಲಿ ರಾಸಾಯನಿಕ ರಾಳಕ್ಕೆ ಬದಲಾಗಿ ಸಂಪೂರ್ಣವಾಗಿ ಪದರವನ್ನು ಬಳಸಲಾಗುತ್ತದೆ. ಬಿಸ್ಫೆನಾಲ್ ಎ ಜ್ವಾಲೆಯ ವಿಲಂಬಕ ಟೆಟ್ರಾಬ್ರೋಮೊಬಿಸ್ಫೆನಾಲ್ ಎ ಗೆ ಪೂರ್ವವರ್ತಿಯೂ ಸಹ ಆಗಿದೆ, ಹಾಗಿ ಇದನ್ನು ಈ ಹಿಂದೆ ಒಂದು ಶಿಲೀಂಧ್ರನಾಶಕವಾಗಿ ಬಳಸಲಾಗುತ್ತಿತ್ತು. ಬಿಸ್ಫೆನಾಲ್ ಎ, ಕಾರ್ಬನ್ ರಹಿತ ಕಾಪಿ ಕಾಗದ ಹಾಗು ಶಾಖಧಾರಕ ಕಾಗದದ ಒಂದು ಯೋಗ್ಯ ಬಣ್ಣ ಅಭಿವರ್ಧಕವಾಗಿದೆ, ಜೊತೆಗೆ ಇದು ಬಹುತೇಕ ಸಾಮಾನ್ಯವಾಗಿ ಶಾಖಧಾರಕ ರಶೀದಿ ಕಾಗದದ ಮಾರಾಟದ ಸ್ಥಳದಲ್ಲಿ ಸಾರ್ವಜನಿಕ ಒಡ್ಡಿಕೆ ಉಂಟಾಗುತ್ತದೆ.. -ಆಧಾರಿತ ಉತ್ಪನ್ನಗಳನ್ನು ಎರಕಗಾರಿಕೆ ಅಚ್ಚುಗಳಲ್ಲಿ ಹಾಗು ನೀರಿನ ಪೈಪುಗಳ ಒಳಪದರದಲ್ಲಿಯೂ ಸಹ ಬಳಸಲಾಗುತ್ತದೆ. === ಪ್ಲ್ಯಾಸ್ಟಿಕ್ ಗಳಲ್ಲಿ ಗುರುತಿಸುವಿಕೆ === "ಸಾಮಾನ್ಯವಾಗಿ, ೧, ೨, ೪, ೫, ಹಾಗು ೬ ಎಂಬ ಮರುಬಳಕೆಯ ಸಂಖ್ಯೆಗಳನ್ನು ಹೊಂದಿರುವ ಪ್ಲ್ಯಾಸ್ಟಿಕ್ ಗಳು BPAಯನ್ನು ಒಳಗೊಂಡಿರುವ ಸಂಭವವಿರುವುದಿಲ್ಲ. ಆದರೆ, ಎಲ್ಲವೂ ಅಲ್ಲದಿದ್ದರೂ, ೩ ಅಥವಾ ೭ ಎಂಬ ಮರುಬಳಕೆ ಸಂಕೇತಗಳಿಂದ ಗುರುತಿಸಲಾಗುವ ಪ್ಲ್ಯಾಸ್ಟಿಕ್ ಗಳು BPAಯಿಂದ ತಯಾರಿಕೆಯಾಗಿರಬಹುದು." ವಸ್ತುಗಳ ಪ್ಯಾಕೇಜಿಂಗ್‌ನಲ್ಲಿ ಏಳು ವಿಧದ ಪ್ಲ್ಯಾಸ್ಟಿಕ್ ಗಳನ್ನು ಬಳಸಲಾಗುತ್ತದೆ. ೭ನೇ ಮಾದರಿಯು "ಇತರ" ಮಾದರಿಗಳ ಅಡಕುಚೀಲವಾಗಿದೆ, ಹಾಗು ಕೆಲವು ಮಾದರಿ ೭ ಪ್ಲ್ಯಾಸ್ಟಿಕ್ ಗಳು ಉದಾಹರಣೆಗೆ ಪಾಲಿಕಾರ್ಬೋನೆಟ್(ಕೆಲವೊಂದು ಬಾರಿ ಮರುಬಳಕೆ ಸಂಕೇತದ ಸಮೀಪದಲ್ಲಿ "" ಎಂಬ ಅಕ್ಷರಗಳಿಂದ ಗುರುತಿಸಲ್ಪಡುತ್ತದೆ) ಹಾಗು ರಾಸಾಯನಿಕ ರಾಳಗಳು, ಬಿಸ್ಫೆನಾಲ್ ಎ ಮಾನೊಮರ್ ನಿಂದ ತಯಾರಾಗಿರುತ್ತವೆ. ೩ನೇ ಮಾದರಿ () ಸಹ ಪ್ಲಾಸ್ಟಿಕಾರಕದಲ್ಲಿ ಆಕ್ಸಿಡೀಕಾರಕ ಪ್ರತಿರೋಧಿಯಾಗಿ ಬಿಸ್ಫೆನಾಲ್ ಎ ಯನ್ನು ಒಳಗೊಳ್ಳಬಹುದು. ಇದು "ನಮ್ಯವಾದ "ಯಲ್ಲಿ ವಾಸ್ತವಾಂಶವಾದರೂ ಸಹ, ಪೈಪುಗಳಲ್ಲಿ ಇದು ನಿಜವಲ್ಲ. == ಆರೋಗ್ಯದ ಮೇಲಾಗುವ ಪರಿಣಾಮಗಳು == ಬಿಸ್ಫೆನಾಲ್ ಎ ಒಂದು ಅಂತಃಸ್ರಾವಕ ಭಂಗಕಾರಕವಾಗಿದ್ದು, ಇದು ಸ್ವತಃ ದೇಹದ ಹಾರ್ಮೋನುಗಳ ಅನುಕರಣ ಮಾಡಿ, ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಆರಂಭಿಕ ಬೆಳವಣಿಗೆಯು, ಇದರ ಪರಿಣಾಮಗಳಿಗೆ ಅತ್ಯಂತ ಸಂವೇದನೆಯ ಅವಧಿಯಾಗಿ ಕಂಡುಬರಬಹುದು. ನಿಯಂತ್ರಣಾ ಸಂಸ್ಥೆಗಳು ಮಾನವರಿಗೆ ಸುರಕ್ಷತಾ ಮಟ್ಟವನ್ನು ನಿರೂಪಿಸಿದೆ, ಆದರೆ ಈ ಸುರಕ್ಷತಾ ಮಟ್ಟಗಳು ಪ್ರಸಕ್ತದಲ್ಲಿ ಹೊಸ ವೈಜ್ಞಾನಿಕ ಅಧ್ಯಯನಗಳ ಪರಿಣಾಮವಾಗಿ ಚರ್ಚೆಗೆ ಗ್ರಾಸವಾಗಿದೆ ಅಥವಾ ವಿಮರ್ಶೆಗೆ ಒಳಪಟ್ಟಿದೆ. ೨೦೦೯ರಲ್ಲಿ ದಿ ಎನ್ಡೋಕ್ರಿನ್ ಸೊಸೈಟಿ, ಪ್ರಸಕ್ತ ಮಾನವ ಜನಾಂಗವು BPAಗೆ ಒಡ್ಡಿಕೊಂಡಾಗ ಉಂಟಾಗುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿತು. === ಹಿಂದಿನ ಅಧ್ಯಯನಗಳು === ೨೦೦೭ರಲ್ಲಿ, ೩೮ ಮಂದಿ ತಜ್ಞರು ಬಿಸ್ಫೆನಾಲ್ ಎ ಮೇಲೆ ನಡೆಸಿದಂತಹ ಅಧ್ಯಯನಗಳ ಬಹುಮತಾಭಿಪ್ರಾಯದ ಹೇಳಿಕೆಯಲ್ಲಿ, ಜನರಲ್ಲಿರುವ ಸರಾಸರಿ ಮಟ್ಟವು ಪ್ರಯೋಗಾಲಯದ ಪ್ರಯೋಗಗಳಲ್ಲಿ ಅನೇಕ ಪ್ರಾಣಿಗಳಿಗೆ ಹಾನಿಯುಂಟುಮಾಡುವ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ತೀರ್ಮಾನಿಸಲಾಯಿತು ..ನ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಕರೆದ ಒಂದು ಸಮಿತಿಯು, ಭ್ರೂಣ ಹಾಗು ಹಸುಳೆಯ ಬುದ್ದಿ ಬೆಳವಣಿಗೆ ಹಾಗು ಅದರ ನಡವಳಿಕೆಯ ಮೇಲೆ BPAನ ಪರಿಣಾಮಗಳ ಬಗ್ಗೆ "ಸ್ವಲ್ಪಮಟ್ಟಿಗಿನ ಕಳವಳ"ವಿದೆಯೆಂದು ನಿರ್ಧರಿಸಿತು. ಒಂದು ಅಂದಾಜಿನ ಪ್ರಕಾರ ಹಸುಳೆಗಳು ಹಾಗು ಮಕ್ಕಳು ದಿನನಿತ್ಯದಲ್ಲಿ ಅತ್ಯಧಿಕವಾಗಿ BPAಯನ್ನು ಸೇವಿಸುತ್ತಾರೆಂಬ ವಾಸ್ತವವು ಹಸುಳೆಗಳ ಮೇಲೆ ಪರಿಣಾಮದ ಬಗ್ಗೆ ಮತ್ತಷ್ಟು ಕಳವಳವನ್ನು ಹೆಚ್ಚಿಸಿತು. ..ನ ನ್ಯಾಷನಲ್ ಟಾಕ್ಸಿಕಾಲಜಿ ಪ್ರೋಗ್ರಾಮ್() ೨೦೦೮ರಲ್ಲಿ ನೀಡಿದ ವರದಿಯಲ್ಲಿ ಸಮಿತಿಗೆ ತನ್ನ ಸಹಮತವನ್ನು ಸೂಚಿಸಿತು, ಇದರಂತೆ "ಮಿದುಳು, ನಡವಳಿಕೆ, ಹಾಗು ಭ್ರೂಣಾವಸ್ಥೆಯಲ್ಲಿರುವ ಶಿಶುವಿನ ಪ್ರಾಸ್ಟೇಟ್ ಗ್ರಂಥಿ, ಹಸುಳೆಗಳು, ಹಾಗು ಮಕ್ಕಳು ಪ್ರಸಕ್ತದಲ್ಲಿ ಬಿಸ್ಫೆನಾಲ್ ಎ ಗೆ ಒಡ್ಡಿಕೊಂಡರೆ ಅದು ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಕೆಲವು ಆತಂಕವನ್ನು ವ್ಯಕ್ತಪಡಿಸಿತು ಹಾಗು ಇದು " ಹಾಗು ಭ್ರೂಣಗಳು, ಹಸುಳೆಗಳು ಮತ್ತು ಮಕ್ಕಳು ಬಿಸ್ಫೆನಾಲ್ ಎಗೆ ಪ್ರಸಕ್ತ ಒಡ್ಡಿಕೆಗಳಿಂದ ಮಹಿಳೆಯರಲ್ಲಿ ಮುಂಚಿತವಾಗಿ ಮೈನೆರೆಯುವ ಬಗ್ಗೆ ಮತ್ತು ಸ್ತನ ಗ್ರಂಥಿಯ ಮೇಲೆ ಪರಿಣಾಮಗಳ ಬಗ್ಗೆ ಕನಿಷ್ಠ ಕಳವಳವನ್ನು ವ್ಯಕ್ತಪಡಿಸಿತ್ತು" ಬಿಸ್ಫೆನಾಲ್ ಎ ಗೆ ಒಡ್ಡಿಕೊಂಡಂತಹ ಗರ್ಭಿಣಿ ಮಹಿಳೆಯರು ಭ್ರೂಣ ಅಥವಾ ನವಜಾತ ಶಿಶುವಿನ ಮರಣಕ್ಕೆ,ಹುಟ್ಟಿನ ನ್ಯೂನತೆಗಳು, ಅಥವಾ ಹುಟ್ಟುವಾಗ ಕಡಿಮೆ ತೂಕ ಹಾಗು ಇತರ ಮಕ್ಕಳಿಗಿಂತ ಕಡಿಮೆ ಬೆಳವಣಿಗೆಯಲ್ಲಿ ಫಲಿತಾಂಶ ನೀಡುವ ಬಗ್ಗೆ ನಗಣ್ಯ ಕಳವಳವನ್ನು ವ್ಯಕ್ತಪಡಿಸಿತು." === ಸ್ಥೂಲಕಾಯತೆ === ೨೦೦೮ರ ಒಂದು ಪುನರ್ವಿಮರ್ಶೆಯ ಪ್ರಕಾರ, ಸ್ಥೂಲಕಾಯತೆಯು BPAಗೆ ಒಡ್ಡಿಕೆಯ ಕ್ರಿಯೆಯಿಂದ ಹೆಚ್ಚಾಗಬಹುದು. ಇದು ವಿಜ್ಞಾನಿಗಳು ಹಾಗು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಂದ ಅಧಿಕ ಕಳವಳಕ್ಕೆ ಒಳಪಟ್ಟಿದೆ". ಲಭ್ಯವಿರುವ ಅಧ್ಯಯನಗಳ ಮೇಲೆ ೨೦೦೯ರಲ್ಲಿ ನಡೆಸಲಾದ ಒಂದು ಪುನರ್ಪುನರ್ವಿಮರ್ಶೆಯು "ಪ್ರಸವಪೂರ್ವದಲ್ಲಿ BPAಗೆ ಒಡ್ಡಿಕೆಯು ದೇಹದ ತೂಕ ಹಾಗು ಸ್ಥೂಲತೆಯ ಮೇಲೆ ನಿರಂತರವಾದ ಪರಿಣಾಮಗಳನ್ನು ಬೀರುತ್ತದೆಂದು ತೀರ್ಮಾನಿಸಿತು. ೨೦೦೯ರ ಮತ್ತೊಂದು ಪುನರ್ವಿಮರ್ಶೆಯು ()ಗೆ ಒಡ್ಡಿಕೊಳ್ಳುವುದನ್ನು ವರ್ಜಿಸುವುದು ಹಾಗು ಬೆಳವಣಿಗೆಯ ಹಂತದಲ್ಲಿ ಪೌಷ್ಟಿಕತೆಯ ಸುಧಾರಣೆ ಮಾಡಿಕೊಳ್ಳುವುದರಿಂದ ಸ್ಥೂಲತೆ ಹಾಗು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ತಗ್ಗುವ ಸಂಭವವಿರುತ್ತದೆ" ಎಂದು ತೀರ್ಮಾನಿಸಿತು. ಇತರ ಪುನರ್ವಿಮರ್ಶೆಗಳೂ ಸಹ ಇದೆ ರೀತಿಯಾದ ತೀರ್ಮಾನಕ್ಕೆ ಬಂದಿವೆ. === ನರವೈಜ್ಞಾನಿಕ ವಿಷಯಗಳು === ..ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕರೆದ ಒಂದು ಸಮಿತಿಯು ಭ್ರೂಣ ಹಾಗು ಹಸುಳೆಯ ಬುದ್ದಿ ಬೆಳವಣಿಗೆ ಹಾಗು ಅದರ ನಡವಳಿಕೆಯ ಮೇಲೆ BPAನ ಪರಿಣಾಮಗಳ ಬಗ್ಗೆ "ಸ್ವಲ್ಪಮಟ್ಟಿಗಿನ ಕಳವಳ"ವಿದೆ ಎಂದು ನಿರ್ಧರಿಸಿತು. ..ನ ನ್ಯಾಷನಲ್ ಟಾಕ್ಸಿಕಾಲಜಿ ಪ್ರೋಗ್ರಾಮ್() ೨೦೦೮ರಲ್ಲಿ ನೀಡಿದ ಒಂದು ವರದಿಯು ನಂತರದಲ್ಲಿ ತಜ್ಞರ ಸಮಿತಿಗೆ ತನ್ನ ಸಹಮತವನ್ನು ಸೂಚಿಸಿ, "ಮಿದುಳಿನ ಮೇಲೆ ಅದು ಉಂಟುಮಾಡುವ ಪರಿಣಾಮದ ಬಗ್ಗೆ ಸ್ವಲ್ಪ ಮಟ್ಟಿಗೆ ಕಳವಳವನ್ನು ವ್ಯಕ್ತಪಡಿಸಿತು". ಜನವರಿ ೨೦೧೦ರಲ್ಲಿ, ಸಹ ಇದೆ ಮಟ್ಟದಲ್ಲಿ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ೨೦೦೭ರ ಒಂದು ಪುನರ್ಪುನರ್ವಿಮರ್ಶೆಯು, , ಇತರ ಕ್ಸೆನೋಈಸ್ಟ್ರೋಜನ್ ಗಳ ಮಾದರಿಯಲ್ಲಿ ನರಮಂಡಲದೊಳಗೆ ಚಟುವಟಿಕೆ ನಡೆಸುತ್ತದೆಂದು ಪರಿಗಣಿಸಬೇಕೆಂದು ತೀರ್ಮಾನಿಸಿತು. ಇದು ತನ್ನ ಬಹು ಮಾರ್ಗಗಳ ಮೂಲಕ ಅದರ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಅಥವಾ ಬದಲಿಸಬಹುದು. ೨೦೦೭ರ ಒಂದು ಪುನರ್ವಿಮರ್ಶೆಯ ಪ್ರಕಾರ, ಇಲಿಗಳು ಹಾಗು ಮೂಷಿಕಗಳ ಮೇಲೆ ನಡೆಸಲಾದಂತಹ ಪ್ರಯೋಗವನ್ನು ಆಧರಿಸಿ ಬೆಳವಣಿಗೆಯ ಹಂತದಲ್ಲಿ BPAನ ಕಡಿಮೆ ಮಟ್ಟದ ಪ್ರಮಾಣವು ಮಿದುಳಿನ ರಚನೆ, ಚಟುವಟಿಕೆ ಹಾಗು ನಡವಳಿಕೆಯ ಮೇಲೆ ನಿರಂತರವಾದ ಪರಿಣಾಮವನ್ನು ಬೀರಬಹುದು ಎಂದು ತೀರ್ಮಾನಿಸಿತು. ೨೦೦೮ರ ಒಂದು ಪುನರ್ವಿಮರ್ಶೆಯು, ತಾಯಿ ಇಲಿಯು ಕಡಿಮೆ ಪ್ರಮಾಣದಲ್ಲಿ BPAಗೆ ಒಡ್ಡಿಕೊಂಡಾಗ, ಅದು ಇಲಿಗಳಲ್ಲಿ ನರನಡವಳಿಕೆ ಬೆಳವಣಿಗೆಯ ಮಟ್ಟದಲ್ಲಿ ದೀರ್ಘವಾದ ಪರಿಣಾಮಗಳನ್ನು ಉಂಟುಮಾಡಬಹುದು. ೨೦೦೮ರ ಒಂದು ಪುನರ್ವಿಮರ್ಶೆಯಲ್ಲಿ, ಬಿಸ್ಫೆನಾಲ್-ಎ ()ಗೆ ನವಜಾತ ಶಿಶುವು ಒಡ್ಡಿಕೊಂಡಾಗ, ಅದು ಲೈಂಗಿಕವಾಗಿ ದ್ವಿರೂಪಿ ಮೆದುಳು ರಚನೆಯ ಮೇಲೆ ಹಾಗು ವಯಸ್ಸಾದ ಇಲಿಗಳಲ್ಲಿ ನರಕೋಶದ ಪ್ರಕಟ ಲಕ್ಷಣಗಳ ಮೇಲೆ ಪರಿಣಾಮ ಉಂಟಾಗುತ್ತದೆಂಬ ತೀರ್ಮಾನಕ್ಕೆ ಬಂದಿತು. ೨೦೦೮ರ ಒಂದು ಪುನರ್ವಿರ್ಶೆಯು, ದೀರ್ಘಾವಧಿಯಲ್ಲಿ ಸಮಷ್ಟಿ ಪರಿಣಾಮವನ್ನು ಕಡಲ್ಗುದುರೆಯಲ್ಲಿ ಬದಲಿಸುತ್ತದೆಂದು ವಿವರಿಸಿತು ಹಾಗು ನಾನೋಮೊಲಾರ್ ಪ್ರಮಾಣವು ಸ್ಮರಣ ಶಕ್ತಿ ಪ್ರಕ್ರಿಯೆಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡಬಹುದು. ೨೦೦೯ರ ಒಂದು ಪುನರ್ಪುನರ್ವಿಮರ್ಶೆಯು, ಆಂಟೆರೋವೆಂಟ್ರಲ್ ಪೆರಿವೆಂಟ್ರಿಕ್ಯುಲರ್ ಬೀಜಕಣದ ಮೇಲೆ ಪರಿಣಾಮವನ್ನು ಬೀರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತು. ಯೇಲ್ ಸ್ಕೂಲ್ ಆಫ್ ಮೆಡಿಸಿನ್ ೨೦೦೮ರಲ್ಲಿ ನಡೆಸಿದ ಅಧ್ಯಯನವು, ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಏಜೆನ್ಸಿ() ಯ ಗರಿಷ್ಠ ೫೦ µg/ಕೆಜಿ/ಪ್ರತಿದಿನ ಸುರಕ್ಷಿತ ಪ್ರಮಾಣಕ್ಕೆ ಸಮನಾದ ಮಟ್ಟಗಳಿಗೆ ಬಿಸ್ಫೆನಾಲ್ ಎಗೆ ಒಡ್ಡಿಕೊಂಡರೆ ಮಾನವೇತರ ಸಸ್ತನಿ ಗಳಲ್ಲಿ ಪ್ರತಿಕೂಲ ನರವೈಜ್ಞಾನಿಕ ಪರಿಣಾಮಗಳು ಉಂಟಾಗುತ್ತದೆಂದು ಪ್ರಯೋಗ ಸಹಿತ ವಿವರಿಸಿತು. ಈ ಸಂಶೋಧನೆಯು, ಹಾಗು ಸ್ಮರಣೆ, ಕಲಿಕೆ ಹಾಗು ಚಿತ್ತಕ್ಕೆ ಮುಖ್ಯವಾದ ಮಿದುಳು ಕೋಶಗಳ ನಡುವಿನ ಸಂಪರ್ಕಗಳಲ್ಲಿ ಸಂಬಂಧವಿದೆ ಎನ್ನುವುದನ್ನು ತೋರಿಸಿದೆ. , ಗಮನ-ಕೊರತೆಯ ಅತಿಯಾದ ಚಟುವಟಿಕೆಯ ಅವ್ಯವಸ್ಥೆ()ಯಲ್ಲಿ ಒಳಗೊಂಡಿರಬಹುದೆಂದು ಅತ್ಯಂತ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾಯಿತು. ೨೦೧೦ರಲ್ಲಿ ಇಲಿಗಳನ್ನು ಆಧರಿಸಿದ ಒಂದು ಅಧ್ಯಯನವು, ಅವುಗಳ ಪ್ರಸವಪೂರ್ವದಲ್ಲಿ ೪೦ ಮಿಕ್ರೋಗ್/ಕೆಜಿ BPAಗೆ ಒಡ್ಡಿಕೊಂಡಿದ್ದರೆ ಕಾರ್ಟಿಕೋಸ್ಟಿರೋನ್ ಮತ್ತು ಮೆದುಳಿನಲ್ಲಿ ಅದರ ಚಟುವಟಿಕೆಗಳು ನ ಪರಿಣಾಮಗಳಿಗೆ ಸಂವೇದನಾಕಾರಿಯಾಗಿರುತ್ತದೆ. ==== ಡೋಪಮಿನರ್ಜಿಕ್ ವ್ಯವಸ್ಥೆಯ ತಡೆ ==== ೨೦೦೫ರ ಒಂದು ಪುನರ್ವಿಮರ್ಶೆಯಲ್ಲಿ ಇಲಿಗಳಲ್ಲಿ ಪ್ರಸವಪೂರ್ವ ಹಾಗು ಆಗ ತಾನೇ ಜನಿಸಿದ ಇಲಿಗಳು BPAಗೆ ಒಡ್ಡಿಕೊಂಡರೆ, ಇದು ಕೇಂದ್ರ ಡೋಪಮೆನರ್ಜಿಕ್ ವ್ಯವಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸಬಹುದು, ಇದು ಮಾದಕದ್ರವ್ಯಗಳಿಗೆ ಅತಿಯಾದ ಸಂವೇದನೆ, ಪ್ರತಿಫಲದ ಪರಿಣಾಮಗಳಿಗೆ ಪ್ರೇರಣೆ, ಅತಿಯಾದ ಚಲನೆಯನ್ನು ಉಂಟುಮಾಡಬಹುದು. ೨೦೦೮ರ ಒಂದು ಪುನರ್ವಿಮರ್ಶೆಯು, , ಮದಜನಕ ಚಟುವಟಿಕೆಯನ್ನು ಹೋಲುವುದರ ಜೊತೆಗೆ ಹಲವಾರು ಡೋಪಮಿನರ್ಜಿಕ್ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಮೆಸೋಲಿಂಬಿಕ್ ಡೋಪಮೈನ್ ಚಟುವಟಿಕೆಯನ್ನು ಹೆಚ್ಚಿಸಿ, ಅಧಿಕ ಚಟುವಟಿಕೆ, ಗಮನ ಕೊರತೆಗಳು, ಹಾಗು ಮಾದಕದ್ರವ್ಯದೆಡೆಗೆ ಅತಿಯಾದ ಸಂವೇದಿತನವನ್ನು ಉಂಟು ಮಾಡುತ್ತದೆ. ೨೦೦೯ರಲ್ಲಿ ಇಲಿಗಳ ಮೇಲೆ ನಡೆಸಲಾದ ಒಂದು ಪ್ರಯೋಗವು, ಪ್ರಸವಪೂರ್ವ ಹಾಗು ಆಗ ತಾನೇ ಜನಿಸಿದಂತಹ ಇಲಿಗಳು BPAಗೆ ಕಡಿಮೆ ಪ್ರಮಾಣದಲ್ಲಿ ಒಡ್ಡಿಕೊಂಡರೆ, ಅದು ಡೋಪಮಿನರ್ಜಿಕ್ ಗ್ರಾಹಕಗಳ ಚಟುವಟಿಕೆಯನ್ನು ಬದಲಿಸಿಕೊಳ್ಳುವ ಮೂಲಕ ಡೋರ್ಸೋಲೇಟರಲ್ ಸ್ಟ್ರೀಯಾಟಂನ ಬೆಳವಣಿಗೆಯಲ್ಲಿ ನ್ಯೂನತೆಗಳನ್ನು ಉಂಟುಮಾಡುತ್ತದೆ. ೨೦೦೯ರ ಮತ್ತೊಂದು ಅಧ್ಯಯನವು, ಡೋಪಮೆನರ್ಜಿಕ್ ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಪತ್ತೆ ಮಾಡಿತು. === ಥೈರಾಯ್ಡ್ ಚಟುವಟಿಕೆ === ೨೦೦೭ರ ಒಂದು ಪುನರ್ವಿಮರ್ಶೆಯು, ಬಿಸ್ಫೆನಾಲ್-ಎ ಥೈರಾಯ್ಡ್ ಹಾರ್ಮೋನು ಗ್ರಾಹಕಗಳಿಗೆ ಅಂಟಿಕೊಂಡಂತೆ ತೋರಿಸಿದೆ ಹಾಗು ಬಹುಶಃ ಇದು ಅದರ ಚಟುವಟಿಕೆಗಳ ಮೇಲೆ ಆಯ್ದ ಪರಿಣಾಮಗಳನ್ನು ಬೀರುತ್ತದೆ. ಪರಿಸರದಲ್ಲಿರುವ ರಾಸಾಯನಿಕಗಳು ಹಾಗು ಥೈರಾಯ್ಡ್ ಚಟುವಟಿಕೆಯನ್ನು ಆಧರಿಸಿದ ೨೦೦೯ರ ಒಂದು ಪುನರ್ವಿಮರ್ಶೆಯು, ಟ್ರೈಯೊಡಾಥಿರೋನೈನ್ನ ಮೇಲೆ BPAನ ಪರಿಣಾಮಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತು ಜೊತೆಗೆ "ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ಸರ್ಕಾರಿ ಏಜೆನ್ಸಿಗಳು, ಥೈರಾಯ್ಡ್ ಗೆ ಅಡ್ಡಿಪಡಿಸುವ ರಾಸಾಯನಿಕಗಳ ಬಳಕೆಯನ್ನು ನಿಯಂತ್ರಿಸಬೇಕು, ಅದರಲ್ಲೂ ವಿಶೇಷವಾಗಿ ಇಂತಹ ಬಳಕೆಗಳು ಗರ್ಭಿಣಿ ಮಹಿಳೆಯರು, ನವಜಾತ ಶಿಶುಗಳು ಹಾಗು ಸಣ್ಣ ಮಕ್ಕಳು ಕಾರಕಗಳಿಗೆ ಒಡ್ಡಿಕೊಳ್ಳುವುದಕ್ಕೆ ಸಂಬಂಧಿಸಿದೆ". ೨೦೦೯ರ ಪುನರ್ವಿಮರ್ಶೆಯು, ಥೈರಾಯ್ಡ್ ಹಾರ್ಮೋನು ಕ್ರಿಯೆಯ ಮೇಲೆ ವಿರುದ್ಧ ಪರಿಣಾಮವನ್ನು ಬೀರುತ್ತದೆಂಬ ತೀರ್ಮಾನಕ್ಕೆ ಬಂದಿತು. === ಕ್ಯಾನ್ಸರ್ ಸಂಶೋಧನೆ === WHOನ ಪ್ರಕಾರ, "ಪ್ರಾಣಿಗಳ ಮೇಲೆ ನಡೆಸಲಾದಂತ ಪ್ರಯೋಗಗಳು BPAನಿಂದ ಉಂಟಾಗುವ ಕ್ಯಾನ್ಸರ್ ನ ಅಪಾಯದ ಬಗ್ಗೆ ದೃಢವಾದ ಸಾಕ್ಷ್ಯಗಳನ್ನು ಒದಗಿಸಿಲ್ಲವೆಂದು" ಅಭಿಪ್ರಾಯ ಪಟ್ಟಿತು. ..ನ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಅಥವಾ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ಬಿಸ್ಫೆನಾಲ್ ಎ ನ ಸಂಭಾವ್ಯ ಕ್ಯಾನ್ಸರ್ ಕಾರಕ ಚಟುವಟಿಕೆಯ ಬಗ್ಗೆ ಮೌಲ್ಯಮಾಪನ ಮಾಡಿಲ್ಲ. ಟಫ್ಟ್ ಯೂನಿವರ್ಸಿಟಿ ಮೆಡಿಕಲ್ ಶಾಲೆಯಲ್ಲಿ ೨೦೧೦ರಲ್ಲಿ ನಡೆಸಲಾದ ಒಂದು ಅಧ್ಯಯನವು, ಬಿಸ್ಫೆನಾಲ್ ಎ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸಬಹುದೆಂದು ಹೇಳಿತು. ==== ಸ್ತನದ ಕ್ಯಾನ್ಸರ್ ==== ೨೦೦೮ರ ಒಂದು ಪುನರ್ವಿಮರ್ಶೆಯು, "ಪ್ರಸವಪೂರ್ವದಲ್ಲಿ (...) ಕಡಿಮೆ ಪ್ರಮಾಣದಲ್ಲಿ(...) BPAಗೆ ಒಡ್ಡಿಕೊಳ್ಳುವುದು ಸ್ತನದ ಬೆಳವಣಿಗೆಯನ್ನು ಮಾರ್ಪಡಿಸುವುದರ ಜೊತೆಗೆ ಸ್ತನ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ". ೨೦೦೮ರ ಮತ್ತೊಂದು ಪುನರ್ವಿಮರ್ಶೆಯು, "ಪ್ರಾಣಿಗಳ ಮೇಲೆ ನಡೆಸಲಾದಂತಹ ಪ್ರಯೋಗಗಳು ಹಾಗು ಸಾಂಕ್ರಾಮಿಕ ಶಾಸ್ತ್ರದ ದತ್ತಾಂಶವು ಭ್ರೂಣವು ಕ್ಸೆನೋಈಸ್ಟ್ರೋಜನ್ ಗಳಿಗೆ ಒಡ್ಡಿಕೊಳ್ಳುವುದರಿಂದ ಕಳೆದ ೫೦ವರ್ಷಗಳಲ್ಲಿ ಗಮನಿಸಿದ ಸ್ತನ ಕ್ಯಾನ್ಸರ್ ಘಟನೆ ಹೆಚ್ಚಳಕ್ಕೆ ಕಾರಣವಿರಬಹುದು ಎಂದು ತೀರ್ಮಾನಿಸಿತು. ೨೦೦೯ರಲ್ಲಿ ನಡೆದ ಒಂದು ಪ್ರನಾಳೀಯ ಅಧ್ಯಯನವು, ಮಹಿಳೆಯರ ಸ್ತನದ ಎಪಿತೀಲಿಕ ಕೋಶಗಳಲ್ಲಿ ನವೋತಕದ ಬದಲಾವಣೆಯನ್ನು ಉಂಟುಮಾಡಲು ಸಮರ್ಥವಾಗಿರುತ್ತದೆಂದು ನಿರ್ಣಯಕ್ಕೆ ಬಂದಿತು. ೨೦೦೯ರ ಮತ್ತೊಂದು ಅಧ್ಯಯನವು, ತಾಯಿಯು ಹಾಲುಣಿಸುವ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ BPAಯನ್ನು ಸೇವಿಸಿದರೆ, ಇದು ದಂಶಕದ ಮಾದರಿಯಲ್ಲಿ ಸ್ತನಗಳ ಕ್ಯಾನ್ಸರ್ ನ ಸಾಧ್ಯತೆಯನ್ನು ಹೆಚ್ಚಿಸುತ್ತದೆಂದು ದೃಢಪಡಿಸಿತು. ೨೦೧೦ರ ಒಂದು ಅಧ್ಯಯನದ ಪ್ರಕಾರ, ಸ್ತನ ಗ್ರಂಥಿಯುಳ್ಳ ಗರ್ಭಧರಿಸಿದ ಇಲಿಗಳ ಮರಿಗಳಿಗೆ ಪ್ರತಿ ಕೇಜಿ ದೇಹತೂಕಕ್ಕೆ ೦, ೨೫ ಅಥವಾ ೨೫೦ µg BPAಯನ್ನು ಉಣಿಸಿದರೆ ಕೋಶೀಯ ಪ್ರಸರಣ ಮುಂತಾದ ಸಂಕೇತದ ಮಾರ್ಗಗಳಲ್ಲಿ ಒಳಗೊಂಡಿರುವ ಮುಖ್ಯ ಪ್ರೋಟೀನ್‌ಗಳು ನಿಂದ ಪ್ರೊಟೀನ್ ಮಟ್ಟದಲ್ಲಿ ನಿಯಂತ್ರಿಸುತ್ತದೆಂದು ತಿಳಿದುಬಂದಿದೆ. ೨೦೧೦ರ ಮತ್ತೊಂದು ಅಧ್ಯಯನವು ನಿರ್ದಿಷ್ಟ ದುರ್ಮಾಂಸಗಳ ಕಿಮೋಥೆರಪಿ ಚಿಕಿತ್ಸೆಗೆ ಸಂವೇದನೆಯನ್ನು ತಗ್ಗಿಸಬಹುದು ಎಂದು ಪತ್ತೆಮಾಡಿದೆ. ==== ನ್ಯೂರೋಬ್ಲ್ಯಾಸ್ಟೋಮ ==== ಪ್ರನಾಳೀಯ ಅಧ್ಯಯನಗಳಲ್ಲಿ , ನ್ಯೂರೋಬ್ಲ್ಯಾಸ್ಟೋಮ ಕೋಶಗಳ ಬೆಳವಣಿಗೆಗೆ ಉತ್ತೇಜಿಸಬಹುದೆಂದು ಸೂಚಿಸಿದೆ. ೨೦೧೦ರ ಒಂದು ಪ್ರನಾಳೀಯ ಅಧ್ಯಯನವು ಪರಿಣಾಮಕಾರಿಯಾಗಿ ಆಕ್ರಮಣವನ್ನು ಉತ್ತೇಜಿಸುತ್ತದೆಂದು ದೃಢಪಡಿಸಿದೆ ಜೊತೆಗೆ -೨ ಹಾಗು -೯ನ ಅತಿಯಾದ ಸ್ರಾವ ಜೊತೆಗೆ TIMP೨ನ ಕಡಿಮೆ ನಿಯಂತ್ರಣದ ಮೂಲಕ ನ್ಯೂರೋಬ್ಲ್ಯಾಸ್ಟೋಮದ ಕೋಶಗಳ ಪರಿವರ್ತನೆಯು ಉಂಟಾಗುತ್ತದೆಂದು ಸೂಚಿಸಿದೆ. ==== ಪ್ರಾಸ್ಟೇಟ್ ಬೆಳವಣಿಗೆ ಹಾಗು ಕ್ಯಾನ್ಸರ್ ==== ೧೯೯೭ರಲ್ಲಿ ಇಲಿಗಳ ಮೇಲೆ ನಡೆಸಲಾದಂತಹ ಅಧ್ಯಯನವು, ಆಗತಾನೆ ಜನಿಸಿದ ಮರಿಗಳಲ್ಲಿ ೨ μg/ಕೆಜಿಯಷ್ಟು ಇಲಿಗಳ ಪ್ರಾಸ್ಟೇಟ್ ತೂಕವನ್ನು ಹೆಚ್ಚುಮಾಡುತ್ತದೆಂದು ಪತ್ತೆ ಮಾಡಿತು. ಇಲಿಗಳನ್ನು ಆಧರಿಸಿ ನಡೆಸಿದಂತಹ ೨೦೦೫ರ ಒಂದು ಅಧ್ಯಯನವು, ಆಗ ತಾನೇ ಜನಿಸಿದ ಇಲಿಗಳಲ್ಲಿ ೧೦ μg/ಕೆಜಿಯಷ್ಟು ಅಧಿಕಗೊಂಡರೆ ಭ್ರೂಣದ ಇಲಿಯ ಪ್ರಾಸ್ಟೇಟ್ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ. ೨೦೦೬ರಲ್ಲಿ ಇಲಿಗಳ ಮೇಲೆ ನಡೆಸಲಾದಂತಹ ಒಂದು ಅಧ್ಯಯನವು ಆಗ ತಾನೇ ಜನಿಸಿದ ಮರಿಯು ೧೦ μg/ಕೆಜಿ ಮಟ್ಟದಲ್ಲಿ ಬಿಸ್ಫೆನಾಲ್ ಎ ಗೆ ಒಡ್ಡಿಕೊಂಡರೆ, ಅದು ದೊಡ್ಡದಾಗುತ್ತಿದ್ದಂತೆ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಪೂರ್ವಕ ಹಾನಿಗಳಿಗೆ ಹಾಗು ಹಾರ್ಮೊನಲ್ ಕ್ಯಾನ್ಸರ್ ಕಾರಕಗಳ ಹೆಚ್ಚಿನ ಪ್ರಭಾವಕ್ಕೆ ಒಳಗಾಗಬಹುದು. ೨೦೦೭ರಲ್ಲಿ ನಡೆಸಲಾದಂತಹ ಒಂದು ಪ್ರನಾಳೀಯ ಅಧ್ಯಯನವು, ಪ್ರಸಕ್ತದಲ್ಲಿ ಮಾನವ ಸೀರಂನಲ್ಲಿ ಅಳತೆ ಮಾಡುವ ಸಾಂದ್ರೀಕರಣದ ಶ್ರೇಣಿಯು ಪ್ರಾಸ್ಟೇಟ್ ಗಾತ್ರದಲ್ಲಿ ನಿರಂತರವಾದ ಹೆಚ್ಚಳದೊಂದಿಗೆ ಸಹಯೋಗವನ್ನು ಹೊಂದಿದೆ. ೨೦೦೯ರ ಒಂದು ಅಧ್ಯಯನವು, BPAನ (೧೦ µg/ಕೆಜಿ)ಕಡಿಮೆ ಪ್ರಮಾಣಕ್ಕೆ ಒಡ್ಡಿಕೊಂಡ ಆಗತಾನೆ ಜನಿಸಿದ ಇಲಿಗಳು, ಅವು ದೊಡ್ದದಾದಾಗ ಹೆಚ್ಚಿನ ಮಟ್ಟದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನ ಪ್ರಭಾವಕ್ಕೆ ಒಳಪಡಬಹುದು. ==== ಮೆತಿಲೀಕರಣ ==== ಬಿಸ್ಫೆನಾಲ್ ಎ ಮೆತಿಲೀಕರಣವನ್ನು ನಿಗ್ರಹಿಸುತ್ತದೆ, ಇದು ಎಪಿಜೆನೆಟಿಕ್ ಬದಲಾವಣೆಗಳೊಂದಿಗೆ ಸಂಬಂಧವನ್ನು ಹೊಂದಿದೆ. === ಸಂತಾನೋತ್ಪತ್ತಿ ವ್ಯವಸ್ಥೆ ಹಾಗು ಲೈಂಗಿಕ ನಡವಳಿಕೆಯ ಬಗ್ಗೆ ಸಂಶೋಧನೆ === ೨೦೦೭ರಲ್ಲಿ ಗರ್ಭ ಧರಿಸಿದ ಇಲಿಗಳ ಮೇಲೆ ನಡೆಸಲಾದಂತಹ ಒಂದು ಅಧ್ಯಯನವು, ಗರ್ಭಾಶಯವನ್ನು ರೂಪಿಸುವ ಪ್ರಮುಖ ಜೀನ್ಸ್ ಗಳಲ್ಲಿ ಬದಲಾವಣೆಯನ್ನು ತರುತ್ತದೆಂದು ತೋರಿಸಿದೆ, ಇದು ಹೆಣ್ಣಿನ ಸಂತಾನೋತ್ಪತ್ತಿ ಅಂಗದ ಬೆಳವಣಿಗೆ ಮೇಲೆ ಪ್ರಭಾವವನ್ನು ಬೀರುವುದರ ಜೊತೆಗೆ ಗರ್ಭ ಧರಿಸಿರುವ ತಾಯಿಯ ಹೊಟ್ಟೆಯಲ್ಲಿರುವ ಹೆಣ್ಣು ಭ್ರೂಣಗಳ ಮೇಲೂ ಅದರ ಭವಿಷ್ಯದ ಫಲವಂತಿಕೆಯ ಮೇಲೆ ಪ್ರಭಾವ ಬೀರುವುದು. ೨೦೦೯ರಲ್ಲಿ ಸರಣಿ ರೂಪದಲ್ಲಿ ನಡೆದ ಅಧ್ಯಯನಗಳು ಈ ರೀತಿಯಾದ ಅಂಶಗಳನ್ನು ಪತ್ತೆ ಮಾಡಿದೆ: ೧ µg/ಕೆಜಿಗಿಂತ ಕಡಿಮೆ ಇರುವ ಒಡ್ಡಿಕೆಯಿಂದ ಇಲಿಯ ಅಂಡಾಶಯದ ವೈಪರೀತ್ಯಗಳಿಂದ ಒಡ್ಡಿಕೆಗಳು ಪ್ರಸವಪೂರ್ವದ ವ್ಯತ್ಯಾಸದ ಗಂಭೀರ ಅವಧಿಗಳಲ್ಲಿ ಉಂಟಾಗಿದ್ದರೆ ಸುದೀರ್ಘ ವ್ಯತಿರಿಕ್ತ ಸಂತಾನೋತ್ಪತ್ತಿ ಮತ್ತು ಕ್ಯಾನ್ಸರ್‌ಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆಂದು ತೀರ್ಮಾನಿಸಿದೆ. ಆಗತಾನೆ ಜನಿಸಿದ ಇಲಿಗಳಲ್ಲಿ ಅಂಡಾಶಯದ ಬೆಳವಣಿಗೆಗೆ ತಡೆಯಾಗಲು ೫೦ µg/ಕೆಜಿಯಷ್ಟು ಕಡಿಮೆ ಪ್ರಮಾಣದ ಒಡ್ಡಿಕೆ ಸಾಕು. ಆಗ ತಾನೇ ಜನಿಸಿದ ಇಲಿಗಳಲ್ಲಿ ೫೦ µg/ಕೆಜಿಯಷ್ಟು ಕಡಿಮೆ BPAಗೆ ಒಡ್ಡಿಕೊಂಡರೆ, ಅದು ವಯಸ್ಕ ಹೆಣ್ಣು ಇಲಿಗಳ ಲೈಂಗಿಕ ನಡವಳಿಕೆಯ ಮೇಲೆ ಪ್ರಭಾವ ಬೀರುವ ಹೈಪೋಥೆಲಮಿಕ್ ಈಸ್ಟ್ರೋಜನ್-ಅವಲಂಬಿತ ವ್ಯವಸ್ಥೆಗಳನ್ನು ಶಾಶ್ವತವಾಗಿ ಬದಲಿಸುತ್ತದೆ. ಪ್ರಸವಪೂರ್ವದಲ್ಲಿ BPAಗೆ (೧೦ μg/ಕೆಜಿ/ಪ್ರತಿದಿನ) ಒಡ್ಡಿಕೊಂಡರೆ ಅದು ಗಂಡು ಕೋತಿಗಳಲ್ಲಿ ಲೈಂಗಿಕ ನಡವಳಿಕೆಗಳ ವ್ಯತ್ಯಾಸದಲ್ಲಿ ಪರಿಣಾಮವನ್ನು ಬೀರಬಹುದು. ಪ್ರನಾಳೀಯ ವಾಗಿರುವ ಜರಾಯು JEG೩ ಕೋಶಗಳಲ್ಲಿ ಈಸ್ಟ್ರೋಜನ್ ಸಂಶ್ಲೇಷಣೆಯನ್ನು ತಗ್ಗಿಸಬಹುದು. ಇನ್ನೂ ಪಕ್ವವಾಗಿರದ ಇಲಿಗಳಲ್ಲಿ ರಕ್ತ-ವೃಷಣ ಪ್ರತಿಬಂಧಕಕ್ಕೆ ತಡೆಯೊಡ್ಡಬಹುದು, ಆದರೆ ಈ ಅಂಶವು ವಯಸ್ಕ ಇಲಿಗಳಲ್ಲಿ ಕಂಡುಬರುವುದಿಲ್ಲ. ಕೆಲಸ ಮಾಡುವ ಜಾಗದಲ್ಲಿ BPAಗೆ ಒಡ್ಡಿಕೊಂಡರೆ ಇದು ವಯಸ್ಕ ಪುರುಷರ ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ಉಂಟುಮಾಡುವುದಕ್ಕೆ ಸಂಬಂಧಿಸಿದೆ. ಬಂಡವಾಳ ಹೂಡಿ, ಕೆಲವು ವಿಜ್ಞಾನಿಗಳು ಇಲಿಗಳ ಮೇಲೆ ನಡೆಸಿದಂತಹ ಅಧ್ಯಯನವು, ಎಥಿನಿಲ್ ಎಸ್ಟ್ರಡಿಯೋಲ್ ಗೆ ಹೋಲಿಸಿದರೆ, ಬಿಸ್ಫೆನಾಲ್ ಎ()ನ ಕಡಿಮೆ ಪ್ರಮಾಣದ ಒಡ್ಡಿಕೆಗಳು, ಹೆಣ್ಣು ಇಲಿಗಳಲ್ಲಿ ಹಲವಾರು ಸಂತಾನೋತ್ಪತ್ತಿ ಕ್ರಿಯೆಗಳು ಹಾಗು ನಡವಳಿಕೆಗಳ ಮೇಲೆ ಯಾವುದೇ ಮಹತ್ವದ ಪರಿಣಾಮವನ್ನು ಬೀರಲಿಲ್ಲವೆಂದು ಸ್ಪಷ್ಟಪಡಿಸಿತು. ಪ್ರಯೋಗದಲ್ಲಿ ಪಾಲಿಕಾರ್ಬೋನೆಟ್ ಪಂಜರಗಳನ್ನು ಬಳಸಿದ್ದಕ್ಕಾಗಿ ಅಧ್ಯಯನವನ್ನು ದೋಷಪೂರಿತವೆಂದು ವಿಮರ್ಶಿಸಲಾಯಿತು(ಏಕೆಂದರೆ ಪಾಲಿಕಾರ್ಬೋನೆಟ್ BPAಯನ್ನು ಒಳಗೊಂಡಿರುತ್ತದೆ) ಹಾಗು ಇಲಿಗಳು ಎಸ್ಟ್ರಾಡಿಯೋಲ್ ಗೆ ಪ್ರತಿರೋಧವನ್ನು ಹೊಂದಿರುತ್ತದೆಂದು ವಾದಿಸಿತು, ಆದರೆ ಈ ವಾದವನ್ನು ಲೇಖಕರು ಹಾಗು ಇತರರು ತಳ್ಳಿಹಾಕಿದರು. ೨೦೧೦ರ ಇಲಿಗಳನ್ನು ಕುರಿತ ಅಧ್ಯಯನವು, ಗರ್ಭಾಶಯದಲ್ಲಿ BPAಗೆ ಒಡ್ಡಿಕೊಳ್ಳುವುದರಿಂದ, ಈಸ್ಟ್ರೋಜನ್‌ನ ಸಂವೇದಿಯಾಗಿ ಶಾಶ್ವತವಾದ ಬದಲಾವಣೆಗಳಿಗೆ ಎಡೆ ಮಾಡಿಕೊಡುತ್ತದೆಂದು ವಿವರಿಸಿತು. ಗರ್ಭಾವಸ್ಥೆಯಲ್ಲಿ BPAಗೆ ಒಡ್ಡಿಕೊಂಡರೆ ಅದು ಗರ್ಭಾಶಯದ ಬೆಳವಣಿಗೆಗೆ ಕಾರಣವಾದ ಜೀನ್ ಒಂದರ ಮೇಲೆ ಪರಿಣಾಮವನ್ನು ಬೀರುತ್ತದೆಂದು ಪತ್ತೆಮಾಡಿದೆ ಹಾಗು ತರುವಾಯ ಇಲಿಗಳು ಹಾಗು ಮನುಷ್ಯರು ಇಬ್ಬರಲ್ಲೂ ಫಲವಂತಿಕೆ ಮೇಲೆ ಪರಿಣಾಮ ಉಂಟುಮಾಡಬಹುದು (HOXA೧೦). ಲೇಖಕರು, "BPAನ ಸುರಕ್ಷತಾ ಮಟ್ಟವು ಎಷ್ಟಿರುತ್ತದೆಂದು ನಮಗೆ ತಿಳಿದಿಲ್ಲ, ಆದ್ದರಿಂದ ಗರ್ಭಿಣಿ ಮಹಿಳೆಯರು BPAಗೆ ಒಡ್ಡಿಕೊಳ್ಳುವುದನ್ನು ನಿಯಂತ್ರಿಸಬೇಕು." ೨೦೧೦ರಲ್ಲಿ ನಡೆಸಲಾದಂತಹ ಅಧ್ಯಯನದಲ್ಲಿ, ಇಲಿಗಳಿಗೆ ನೀಡಲಾದಂತಹ ಪ್ರಮಾಣಗಳು, ಪ್ರಸಕ್ತದಲ್ಲಿ ಮನುಷ್ಯರು ಅನುಭವಿಸುತ್ತಿರುವ ಮಟ್ಟಗಳಿಗೆ ಸಮನಾಗಿದೆಯೆಂದು ಊಹಿಸಲಾಯಿತು. ಈ ಸಂಶೋಧನೆಯು, , ಇಲಿಯ ಭ್ರೂಣಾವಸ್ಥೆಯಲ್ಲಿ ಅಂಡಾಶಯದಲ್ಲಿ ಬೆಳವಣಿಗೆಯಾಗುವ ಮೊಟ್ಟೆಯ ಆರಂಭಿಕ ಹಂತಗಳ ಮೇಲೆ ಪರಿಣಾಮ ಬೀರಿದ್ದನ್ನು ತೋರ್ಪಡಿಸಿತು, ಈ ರೀತಿಯಾಗಿ, ಮುಂದಿನ ಪೀಳಿಗೆಯು, ಕೋಶ ವಿಭಜನೆ ಹಾಗು ಉತ್ಪತ್ತಿ ಪ್ರಕ್ರಿಯೆಗಳಂತಹ ಜೀವವೈಜ್ಞಾನಿಕ ಪ್ರಕ್ರಿಯೆಗಳಲ್ಲಿ ವಂಶವಾಹಿ ದೋಷಗಳಿಗೆ ಗುರಿಯಾಗಬಹುದೆಂದು ಸೂಚಿಸಿತು. ಇದರ ಜೊತೆಯಲ್ಲಿ, ಸಂಶೋಧನಾ ತಂಡವು ತಮ್ಮ ಅಧ್ಯಯನದಲ್ಲಿ ಈ ರೀತಿಯಾದ ಅಂಶವನ್ನು ಗಮನಿಸಿತು "ಕೋಶ ವಿಭಜಕ/ಕೋಶ ಚಕ್ರ ಜೀನುಗಳ ಪರಿಣಾಮಕಾರಿಯಲ್ಲದ ನಿಯಂತ್ರಣ, ಮೈಯಾಸಿಸ್‌ನ ಪ್ರವೇಶಕ್ಕೆ ಮುನ್ನ ತಕ್ಷಣವೇ ಅಧಿಕಗೊಳ್ಳುವ ಸಾಧ್ಯತೆಯಿಂದ,ಭ್ರೂಣದ ಇನ್ನೂ ಫಲಿತವಾಗದ ಅಂಡಾಣುಗಳ ಒಟ್ಟಾರೆ ಮೊತ್ತವನ್ನು ತಗ್ಗಿಸುವ ಮೂಲಕ ಇದು ಹೆಣ್ಣಿನ ಸಂತಾನೋತ್ಪತ್ತಿ ಚಕ್ರವನ್ನು ತಗ್ಗಿಸುವಲ್ಲಿ ಪರಿಣಾಮವನ್ನು ಬೀರಬಹುದು". === ಸಾಮಾನ್ಯ ಸಂಶೋಧನೆ === ೨೦೦೯ರಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿ ಸಭೆಯಲ್ಲಿ, ಪ್ರಯೋಗಾತ್ಮಕವಾಗಿ BPAಗೆ ಒಡ್ಡಿಕೊಂಡಂತಹ ಪ್ರಾಣಿಗಳ ಬಗ್ಗೆ ಹೊಸ ಸಂಶೋಧನಾ ದತ್ತಾಂಶವು ವರದಿಯಾಯಿತು. ಗುಂಪಿನ ವಾರ್ಷಿಕ ಸಭೆಯಲ್ಲಿ ಪ್ರಸ್ತುತ ಪಡಿಸಲಾದಂತಹ ಅಧ್ಯಯನಗಳು, ಮಹಿಳೆಯರ ಹೃದಯದ ಮೇಲೆ ಪರಿಣಾಮವನ್ನು ಬೀರಬಹುದೆಂದು ನಿರೂಪಿಸಿತು, ಇದು ಇಲಿಗಳ DNAಯನ್ನು ಶಾಶ್ವತವಾಗಿ ಹಾನಿ ಮಾಡಬಹುದು, ಹಾಗು ಅಜ್ಞಾತ ಮೂಲಗಳಿಂದ ಮಾನವ ದೇಹಕ್ಕೆ ಪ್ರವೇಶಿಸುತ್ತದೆಂದು ಕಂಡುಬರುತ್ತದೆ. ಸೈಟೋಟ್ರೋಫೋಬ್ಲ್ಯಾಸ್ಟ್ ಕೋಶಗಳ ಮೇಲೆ ನಡೆದಂತಹ ೨೦೦೯ರ ಒಂದು ಪ್ರನಾಳೀಯ ಅಧ್ಯಯನವು, ಪ್ರತಿ ಮಿಲಿ ಲೀಟರ್ ಗೆ ೦.೦೦೦೨ ರಿಂದ ೦.೨ರಷ್ಟು ಮೈಕ್ರೋಗ್ರಾಂಗಳಷ್ಟು ಪ್ರಮಾಣಗಳು ಸೈಟಾಕ್ಸಿಕ್ ಪರಿಣಾಮವನ್ನು ಬೀರುತ್ತದೆಂದು ಪತ್ತೆ ಮಾಡಿದೆ ಜೊತೆಗೆ ಈ ಪತ್ತೆಯು "BPAನ ಕಡಿಮೆ ಪ್ರಮಾಣಗಳು ಜರಾಯುವಿನ ಕೋಶಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಬಹುದು, ಇದು ಜೀವಿಯಲ್ಲಿ ಗರ್ಭಾವಸ್ಥೆಯ ವಿರುದ್ಧ ಪರಿಣಾಮಗಳಾದ ಪ್ರೀಕ್ಲ್ಯಾಮ್‌ಸಿಯಾ, ಗರ್ಭಾಶಯದ ಒಳಗಿನ ಬೆಳವಣಿಗೆಯಲ್ಲಿ ನಿರ್ಬಂಧ, ಅಪಕ್ವತೆ ಹಾಗು ಗರ್ಭಸ್ರಾವವನ್ನು ಉಂಟುಮಾಡಬಹುದು" ಇಲಿಗಳ ಮೇಲೆ ೨೦೦೯ರಲ್ಲಿ ನಡೆಸಲಾದಂತಹ ಒಂದು ಅಧ್ಯಯನವು, ಮನುಷ್ಯರಿಗೆ ಸಂಬಂಧಿಸಿದಂತೆ BPAನ ಸುರಕ್ಷತಾ ಮಿತಿಯು, ಕರುಳಿನ ವ್ಯಾಪ್ಯತೆಯ ಮೇಲೆ ಪರಿಣಾಮವನ್ನು ಉಂಟುಮಾಡಬಹುದೆಂದು ಪತ್ತೆ ಮಾಡಿತು ಜೊತೆಗೆ ಹೆಣ್ಣು ಮಕ್ಕಳು ವಯಸ್ಕರಾಗುತ್ತಿದ್ದ ಹಾಗೆ ತೀವ್ರತರವಾದ ಹೆಗ್ಗರುಳಿನ ಉರಿಯೂತಕ್ಕೆ ಈಡಾಗುವ ಅಪಾಯವಿರುತ್ತದೆ. ಇಲಿಗಳ ಮೇಲೆ ೨೦೧೦ರಲ್ಲಿ ನಡೆಸಲಾದಂತಹ ಒಂದು ಅಧ್ಯಯನವು, ಪ್ರಸವಪೂರ್ವದಲ್ಲಿ ಕುಡಿಯುವ ನೀರಿನಲ್ಲಿರುವ ೧೦ ಮೈಕ್ರೋಗ್ರಾಂ/mLಗಳಷ್ಟು BPAಗೆ ಒಡ್ಡಿಕೊಂಡರೆ ಇದು ಅಲರ್ಜಿ ಹಾಗು ಶ್ವಾಸನಾಳಿಕೆಯ ಕವಲುಗಳಿಗೆ ಸಂಬಂಧಿಸಿದ ಉರಿಯೂತ ಹಾಗು ಪ್ರಾಣಿಗಳಲ್ಲಿ ಆಸ್ತಮಾ ಮಾದರಿಗೆ ಸಂವೇದನಶೀಲತೆಯನ್ನು ಉಂಟು ಮಾಡಬಹುದು. ==== ಮನುಷ್ಯರ ಮೇಲೆ ನಡೆಸಲಾದಂತಹ ಅಧ್ಯಯನಗಳು ==== ===== ಲಾಂಗ್ ಅವರ ಅಧ್ಯಯನ ಹಾಗು ಹೃದಯ ಸಂಬಂಧಿ ಕಾಯಿಲೆಗಳು ===== ಬಿಸ್ಫೆನಾಲ್ ಎ ಗೆ ಸಂಬಂಧಿಸಿದಂತೆ ಮನುಷ್ಯರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಒಂದು ದೊಡ್ಡ ಮಟ್ಟದ ಅಧ್ಯಯನವನ್ನು ೨೦೦೮ರಲ್ಲಿ ಲೈನ್ ಲಾಂಗ್ ಮತ್ತು ಸಹವರ್ತಿಗಳು ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ನಲ್ಲಿ ಪ್ರಕಟಿಸಿದರು. ಬಹುತೇಕವಾಗಿ ೧,೫೦೦ ಜನರ ಮೇಲೆ ನಡೆಸಲಾದಂತಹ ಪ್ರಾತಿನಿಧಿಕ ಮಾದರಿಯ ಅಧ್ಯಯನವು, ಮೂತ್ರದಲ್ಲಿನ ರಾಸಾಯನಿಕದ ಮಟ್ಟವನ್ನು ನೋಡಿ ಬಿಸ್ಫೆನಾಲ್ ಎ ಒಡ್ಡಿಕೆಯನ್ನು ಅಂದಾಜು ಮಾಡಿತು. ಲೇಖಕರು, ಬಿಸ್ಫೆನಾಲ್ ಎ ನ ಅಧಿಕ ಮಟ್ಟಗಳು ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಹಾಗು ಕೆಲವು ಪಿತ್ತಜನಕಾಂಗದ ಕಿಣ್ವಗಳ ಅಪಸಾಮಾನ್ಯ ಅಧಿಕ ಮಟ್ಟಗಳೊಂದಿಗೆ ಗಮನಾರ್ಹ ಸಂಬಂಧಗಳನ್ನು ಹೊಂದಿದೆ. ಇದೆ ವಿಷಯಕ್ಕೆ ಸಂಬಂಧಿಸಿದ ಒಂದು ಅಗ್ರಲೇಖನವು ಈ ರೀತಿಯಾದ ನಿರ್ಣಯಕ್ಕೆ ಬರುತ್ತದೆ: "ಹಿನ್ನೆಲೆ ಮಾಹಿತಿಯನ್ನು ಆಧರಿಸಿ, ಲಾಂಗ್ ಹಾಗು ಮತ್ತಿತರರು ನಡೆಸಿದ ಅಧ್ಯಯನವು, ಮನುಷ್ಯರಿಗೆ ಸಂಬಂಧಿಸಿದಂತೆ ಈ ಕಾಯಿಲೆಗಳೊಂದಿಗೆ ಪೂರ್ವಭಾವಿಯಾಗಿ, ಕೆನೆಡಿಯನ್ ನಿಯಂತ್ರಣಾ ಏಜೆನ್ಸಿಗಳು ಇತ್ತೀಚಿಗೆ ತೆಗೆದುಕೊಂಡಂತಹ ಹೆಜ್ಜೆಗಳನ್ನು ನಿಯಂತ್ರಣಾ ಏಜೆನ್ಸಿಗಳು ಅನುಸರಿಸುವಂತೆ ಪ್ರೇರೇಪಿಸಬೇಕು, ಇದು ಒಂದು "ವಿಷಕಾರ ರಾಸಾಯನಿಕ"ವಾಗಿದ್ದು, ಮನುಷ್ಯರಲ್ಲಿ ಹಾಗು ಪರಿಸರದಲ್ಲಿ ಇದು ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸಲು ಆಕ್ರಮಣಕಾರಿ ಹೆಜ್ಜೆಯ ಅಗತ್ಯವಿದೆ.ಪರ್ಯಾಯವಾಗಿ ಪ್ಲಾಸ್ಟಿಕ್‌ನಲ್ಲಿ ಕೂಡ ಬಳಸುವ ಇನ್ನೊಂದು ಸಂಯುಕ್ತಗಳ ಕುಟುಂಬ ಥಾಲೇಟ್‌ಗಳಿಗೆ ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸುವುದಕ್ಕೆ ರೂಪಿಸಿದ ಫೆಡರಲ್ ಶಾಸನವನ್ನು ಇತ್ತೀಚೆಗೆ ಅನುಮೋದಿಸಲಾಯಿತು. ಈ ಪೂರ್ವನಿದರ್ಶನವನ್ನು ಕಾಂಗ್ರೆಸ್ ಕಾರ್ಯವಿಧಾನವು ಅನುಸರಿಸಬಹುದು. ರೀತಿಯಲ್ಲಿ, ೫ ಥಾಲೇಟ್ ಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರತಿಯೊಬ್ಬರಲ್ಲೂ ವಸ್ತುತಃ ಕಂಡುಬರುತ್ತದೆ.೬. ಈ ಮಸೂದೆಯು USನ ಕಾರ್ಯನೀತಿಯು ಯುರೋಪಿಯನ್ ಮಾದರಿಗೆ ಹತ್ತಿರಕ್ಕೆ ತರುತ್ತದೆ, ಇದರಂತೆ ಕಾರ್ಖಾನೆಗಳು, ಉತ್ಪನ್ನಗಳಲ್ಲಿ ಬಳಸುವ ಮುಂಚೆ ಆ ರಾಸಾಯನಿಕವು ಎಷ್ಟು ಸುರಕ್ಷಿತವೆಂಬ ದತ್ತಾಂಶವನ್ನು ಒದಗಿಸಬೇಕು." ಇದೆ ಗುಂಪಿನ ವಿಜ್ಞಾನಿಗಳು ನಂತರದಲ್ಲಿ ನಡೆಸಿದ ಮತ್ತೊಂದು ಸದೃಶವಾದ ಅಧ್ಯಯನವು ಜನವರಿ ೨೦೧೦ರಲ್ಲಿ ಪ್ರಕಟಗೊಂಡಿತು, ಇದರಂತೆ, ಎರಡನೇ ಬಾರಿ ಅಧ್ಯಯನಕ್ಕೆ ಸಂಗ್ರಹಿಸಲಾದ ಮಾದರಿಯಲ್ಲಿ BPAನ ಪ್ರಮಾಣವು ಕಡಿಮೆಯಿತ್ತಾದರೂ, ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುವ ಅಪಾಯವನ್ನು ಹೊಂದಿತ್ತು ಆದರೆ ಮಧುಮೇಹ ಅಥವಾ ಪಿತ್ತ ಜನಕಾಂಗದ ಕಿಣ್ವಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುತ್ತಿರಲಿಲ್ಲ ಎಂದು ದೃಢಪಡಿಸಿತು. ತಮ್ಮ ಮೂತ್ರದಲ್ಲಿ BPAನ ಅಧಿಕ ಪ್ರಮಾಣವನ್ನು ಹೊಂದಿದ್ದ ರೋಗಿಗಳು, ೩೩%ನಷ್ಟು ಅಧಿಕ ಪರಿಧಮನಿಯ ಹೃದಯ ಕಾಯಿಲೆಗಳ ಅಪಾಯಕ್ಕೆ ತುತ್ತಾಗಿದ್ದರು. ===== ಇತರ ಅಧ್ಯಯನಗಳು ===== ಸೀರಂ ಸಾಂದ್ರೀಕರಣದೊಂದಿಗೆ ಸತತವಾಗಿ ಗರ್ಭಸ್ರಾವಗಳು ಉಂಟಾಗುವುದು ಮೂತ್ರೀಯ ಸಾಂದ್ರೀಕರಣಗಳೊಂದಿಗೆ ರಜೋನಿವೃತ್ತಿಯ ನಂತರದ ಮಹಿಳೆಯರಲ್ಲಿ ಆಕ್ಸಿಡೀಕರಣಶೀಲ ಒತ್ತಡ ಮತ್ತು ಉರಿಯೂತ ಎರಡು ವರ್ಷದ ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ತಾಯಿಯ ಮೂತ್ರೀಯ ಸಾಂದ್ರೀಕರಣವನ್ನು ಹೊಂದಿರುವ ಹೆಣ್ಣು ಮಕ್ಕಳಲ್ಲಿ ಬಹಿರ್ಮುಖ ನಡವಳಿಕೆ ಗಂಡಸರಲ್ಲಿ ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆ ಹಾಗು ಮೂತ್ರೀಯ ಸಾಂದ್ರೀಕರಣಗಳೊಂದಿಗೆ ಗಂಡಸರಲ್ಲಿ ಲೈಂಗಿಕ ಅಪಸಾಮಾನ್ಯ ಕ್ರಿಯೆಗಳನ್ನು ಕುರಿತು ಅಧ್ಯಯನಗಳು ಸಂಬಂಧಿಸಿವೆ. ೨೦೦೭ರಿಂದ ೨೦೦೯ರವರೆಗೆ ನಡೆಸಿದಂತಹ ಕೆನೆಡಿಯನ್ ಹೆಲ್ತ್ ಮೆಷರ್ಸ್ ಸರ್ವೇ, ಹದಿಹರೆಯದವರು ವಯಸ್ಕರಿಗಿಂತ ತಮ್ಮ ದೇಹಗಳಲ್ಲಿ ಶೇಖಡಾ ೩೦ರಷ್ಟು ಅಧಿಕ ಬಿಸ್ಫೆನಾಲ್ ಎ ಯನ್ನು ಹೊಂದಿರುತ್ತಾರೆಂದು ೨೦೧೦ರಲ್ಲಿ ಪ್ರಕಟ ಪಡಿಸಿತು. ಇದರಲ್ಲಿ ನಿಖರವಾದ ಕಾರಣವು ತಿಳಿದುಬಂದಿಲ್ಲ. ೨೦೧೦ರಲ್ಲಿ, ಮೂತ್ರೀಯ ಸಾಂದ್ರೀಕರಣಗಳನ್ನು ವಿಶ್ಲೇಷಿಸಿದ ಒಂದು ಅಧ್ಯಯನವು, ೧೮ ವರ್ಷ ವಯಸ್ಸಿಗೂ ಕಡಿಮೆ ಇರುವ ಜನರಲ್ಲಿ , ಪ್ರತಿರಕ್ಷಿತ ಚಟುವಟಿಕೆಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದೆಂಬ ನಿರ್ಣಯಕ್ಕೆ ಬಂದಿತು. ೨೦೧೦ರಲ್ಲಿ ನಡೆಸಲಾದಂತಹ ಒಂದು ಅಧ್ಯಯನವು, ದೊಡ್ಡ ಪ್ರಮಾಣದ ಮತ್ತು ಉತ್ತಮ ಗುಣಮಟ್ಟದ ಜನಸಂಖ್ಯಾ ಆಧರಿತ ಮಾದರಿಯಲ್ಲಿ ಯುರೋಪಿಯನ್ ವಯಸ್ಕರ ನಡುವೆ ಪ್ರತಿನಿತ್ಯದಲ್ಲಿ BPAನ ವಿಸರ್ಜನಾ ಪ್ರಮಾಣಗಳನ್ನು ವರದಿಮಾಡಿತು. ಇದರಂತೆ BPAನ ಪ್ರತಿನಿತ್ಯದ ವಿಸರ್ಜನೆಯಲ್ಲಿ ಅಧಿಕತೆಯು, ಪುರುಷರಲ್ಲಿ ಸೀರಂನ ಒಟ್ಟಾರೆ ಟೆಸ್ಟೋಸ್ಟೆರೋನ್ ಸಾಂದ್ರೀಕರಣದಲ್ಲಿ ಹೆಚ್ಚಳದೊಂದಿಗೆ ಸಂಬಂಧಿಸಿದೆ. ೨೦೧೧ರ ಒಂದು ಅಧ್ಯಯನವು, ನಿಯಂತ್ರಣದಲ್ಲಿರುವ ಮಹಿಳೆಯರಿಗೆ ಹೋಲಿಸಿದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಹೊಂದಿರುವ ಮಹಿಳೆಯರಲ್ಲಿ ಮಟ್ಟಗಳು ಅಧಿಕವಾಗಿರುತ್ತದೆ. ಇದಲ್ಲದೆ, ಸಂಶೋಧಕರು ಈ ಮಹಿಳೆಯರಲ್ಲಿ BPAಹಾಗು ಪುರುಷರ ಲೈಂಗಿಕ ಹಾರ್ಮೋನುಗಳ ನಡುವೆ ಸಂಖ್ಯಾಶಾಸ್ತ್ರರೀತ್ಯಾ ಮಹತ್ವದ ಗುಣಾತ್ಮಕ ಸಹಯೋಗವನ್ನು ಪತ್ತೆ ಮಾಡಿದ್ದಾರೆ, ಇದು ಅಂಡಾಶಯದ ಅಪಸಾಮಾನ್ಯ ಕ್ರಿಯೆಯ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆಂದು ಸೂಚಿಸಿದೆ. ೨೦೧೦ರ ಒಂದು ಅಧ್ಯಯನವು, ಅಧಿಕ ಮಟ್ಟಗಳ BPAಯನ್ನು ಹೊಂದಿರುವ ೧೮ ವರ್ಷಕ್ಕೂ ಮೇಲ್ಪಟ್ಟ ಜನರು ಅಧಿಕ ಪ್ರತಿಕಾಯ ಮಟ್ಟಗಳನ್ನು ಹೊಂದಿರುತ್ತಾರೆ, ಇದು ಅವರ ಕೋಶ-ಮಧ್ಯವರ್ತಿ ಪ್ರತಿರಕ್ಷಿತ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲವೆಂಬುದನ್ನು ಸೂಚಿಸುತ್ತದೆ. : ===== ಲೈಂಗಿಕ ತೊಂದರೆಗಳು ===== ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಚೀನಾದ ಕೆಲಸಗಾರರನ್ನು ಆಧರಿಸಿದ ಒಂದು ಸಂಶೋಧನೆಯು ೨೦೦೯ರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯು ಸಾಮಾನ್ಯ ಮನುಷ್ಯರಿಗಿಂತ ನಾಲ್ಕು ಪಟ್ಟು ಅಧಿಕವಾಗಿತ್ತೆಂದು ವರದಿ ಮಾಡಿತು. ಲೈಂಗಿಕಾಸಕ್ತಿಯನ್ನು ತಗ್ಗಿಸುವುದರ ಜೊತೆಗೆ ಕಡಿಮೆ ಪ್ರಮಾಣದಲ್ಲಿ BPAಗೆ ಒಡ್ಡಿಕೊಂಡ ಕೆಲಸಗಾರರಿಗೆ ಹೋಲಿಸಿದರೆ ಇವರುಗಳ ಲೈಂಗಿಕ ಜೀವನವು ಒಟ್ಟಾರೆಯಾಗಿ ಅತೃಪ್ತಿಕರವಾಗಿತ್ತೆಂದು ವರದಿಯಾಯಿತು. ಕೆಲಸಗಾರರೂ ಸಹ ಏಳು ಪಟ್ಟು ಅಧಿಕ ಸ್ಖಲನ ತೊಂದರೆಗಳನ್ನು ಎದುರಿಸುತ್ತಿದ್ದರು. ಇವರುಗಳು ಕಾರ್ಖಾನೆಯಲ್ಲಿ ಕೆಲಸವನ್ನು ಆರಂಭಿಸಿದ ಒಂದು ವರ್ಷದೊಳಗೆ ತಗ್ಗಿದ ಲೈಂಗಿಕ ಕ್ರಿಯೆಯ ಬಗ್ಗೆ ವರದಿ ಮಾಡಿದರು, ಹಾಗು ಅವರು ಹೆಚ್ಚು ಹೆಚ್ಚು ಇದಕ್ಕೆ ಒಡ್ಡಿಕೊಳ್ಳತೊಡಗಿದಾಗ, ಲೈಂಗಿಕವಾಗಿ ತೊಂದರೆಗಳನ್ನು ಎದುರಿಸಿದರು. ==== ಐತಿಹಾಸಿಕ ಅಧ್ಯಯನಗಳು ==== ಬಿಸ್ಫೆನಾಲ್ ಎ ನ ಈಸ್ಟ್ರೋಜೆನಿಸಿಟಿಯ ಮೊದಲ ಸಾಕ್ಷ್ಯವು, ೧೯೩೦ರಲ್ಲಿ ಇಲಿಗಳ ಮೇಲೆ ನಡೆಸಲಾದಂತಹ ಪ್ರಯೋಗಗಳಿಂದ ಬಂದಿತು, ಆದರೆ ಪ್ರಯೋಗಾಲಯದ ಪ್ರಾಣಿಗಳ ಮೇಲೆ ಕಡಿಮೆ ಪ್ರಮಾಣದ ಒಡ್ಡಿಕೆಯಿಂದ ಪ್ರತಿಕೂಲ ಪರಿಣಾಮಗಳು ೧೯೯೭ರಲ್ಲಿ ಮೊದಲಿಗೆ ವರದಿಯಾಯಿತು. === ಪ್ರಾಣಿಗಳಲ್ಲಿ ಕಡಿಮೆ ಪ್ರಮಾಣದ ಒಡ್ಡಿಕೆ === ೩೦. ಪ್ರಸಕ್ತದಲ್ಲಿ ..ನಲ್ಲಿ ಮನುಷ್ಯರು ೫೦ µg/ಕೆಜಿ/ಪ್ರತಿದಿನ ಒಡ್ಡಿಕೊಳ್ಳಬಹುದೆಂದು ಮಿತಿಯನ್ನು ಹಾಕಿದೆ. === ಕ್ಸೆನೋಈಸ್ಟ್ರೋಜನ್ === ಈಸ್ಟ್ರೋಜನ್-ಸಂಬಂಧಿತ ಗ್ರಾಹಕ γ ಕ್ಕೆ ಬಲವಾಗಿ ಬಂಧನವಾಗುವ ಮೂಲಕ ಬಿಸ್ಫೆನಾಲ್ ಎ ಕ್ಸೆನೋಈಸ್ಟ್ರೋಜನ್ ಆಗಿ ಕಾರ್ಯನಿರ್ವಹಿಸುತ್ತದೆಂಬುದಕ್ಕೆ ಸಾಕ್ಷ್ಯಗಳು ದೊರೆತಿವೆ. ಈ ಒಂಟಿಯಾದ ಗ್ರಾಹಕವು(ಅಂತರ್ವರ್ಧಕ ಲಿಗಂಡ್ ಯಾವುದೆಂದು ತಿಳಿದುಬಂದಿಲ್ಲ) ನಕಲಿನ ರಚನಾತ್ಮಕ ಸಕ್ರಿಯಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. , -γಗೆ ಬಲವಾಗಿ ಬಂಧನವಾಗಿರುವಂತೆ ಕಂಡುಬರುತ್ತದೆ(ವಿಯೋಜನಾ ನಿಯತಾಂಕ = ೫.೫ ), ಆದರೆ ಈಸ್ಟ್ರೋಜನ್ ಗ್ರಾಹಕ() ಅಲ್ಲ. -γಗೆ ಬಂಧಕವಾಗಿರುವ , ಅದರ ಮೂಲಭೂತ ರಚನಾತ್ಮಕ ಚಟುವಟಿಕೆಯನ್ನು ಹಾಗೆ ಉಳಿಸಿಕೊಳ್ಳುತ್ತದೆ. ಇದು, ಆಯ್ದ ಈಸ್ಟ್ರೋಜನ್ ಗ್ರಾಹಕ ಮಾಡ್ಯೂಲೇಟರ್ ೪-ಹೈಡ್ರೋಜೈಟಮಾಕ್ಸಿಫೆನ್ ನಿಂದ ನಿಷ್ಕ್ರಿಯಗೊಳ್ಳುವುದರಿಂದಲೂ ಸಹ ತಡೆಗಟ್ಟಬಹುದು. ದೇಹದ ವಿವಿಧ ಅಂಗಗಳಲ್ಲಿ -γನ ವಿವಿಧ ನಿರೂಪಣೆಗಳು, ಬಿಸ್ಫೆನಾಲ್ ಎ ನ ಪರಿಣಾಮಗಳಲ್ಲಿನ ಭಿನ್ನತೆಗೆ ಕಾರಣವಾಗುತ್ತದೆ. ಉದಾಹರಣೆಗೆ, ಜರಾಯುವಿನಲ್ಲಿ -γನ ಅಧಿಕ ಸಾಂದ್ರೀಕರಣವು ಪತ್ತೆಯಾಗಿದೆ, ಇದನ್ನು ಈ ಕೋಶದಲ್ಲಿ ಬಿಸ್ಫೆನಾಲ್ ಎ ನ ಅಧಿಕ ಶೇಖರಣೆಯ ಬಗ್ಗೆ ವರದಿಗಳು ವಿವರಿಸುತ್ತವೆ. == ಮಾನವ ಒಡ್ಡಿಕೆ ಮೂಲಗಳು == ಬಿಸ್ಫೆನಾಲ್ ಎ, ಸಿದ್ಧಪಡಿಸಿದ ಆಹಾರಗಳ ಪ್ಲ್ಯಾಸ್ಟಿಕ್ ಒಳಪದರದೊಳಗೆ ಸ್ರವಿಸುತ್ತದೆ ಹಾಗು, ಪಾಲಿಕಾರ್ಬೋನೆಟ್ ಪ್ಲ್ಯಾಸ್ಟಿಕ್ ಗಳಲ್ಲಿ ಕಡಿಮೆ ಮಟ್ಟದಲ್ಲಿ ಸ್ರವಿಸುತ್ತದೆ, ಅದರಲ್ಲೂ ವಿಶೇಷವಾಗಿ ಗಡುಸಾದ ಸಾಬೂನು ಗಳಿಂದ ಶುಭ್ರಗೊಳಿಸಿದಾಗ ಅಥವಾ ಆಮ್ಲೀಯ ಅಥವಾ ಅಧಿಕ-ತಾಪಮಾನವುಳ್ಳ ದ್ರವಗಳನ್ನು ಹೊಂದಿದ್ದರೆ ಈ ರೀತಿ ಸ್ರವಿಸುವುದು ಕಂಡುಬರುತ್ತದೆ. ಒಂದು ಇತ್ತೀಚಿನ ಹೆಲ್ತ್ ಕೆನಡಾ ಅಧ್ಯಯನವು, ಬಹುತೇಕವಾಗಿ ತಂಪು ಪಾನೀಯಗಳನ್ನೂ ಒಳಗೊಳ್ಳುವ ಕ್ಯಾನ್ ಗಳಲ್ಲಿ ಪರೀಕ್ಷೆ ನಡೆಸಿದಾಗ ಕಡಿಮೆ ಮಟ್ಟದ ಆದರೆ ಅಳೆಯಬಹುದಾದ ಮಟ್ಟದ ಬಿಸ್ಫೆನಾಲ್ ಎ ಯನ್ನು ಹೊಂದಿರುತ್ತದೆ. ಲೋಹದ ಕ್ಯಾನ್ ಗಳ ಮೂಲಕವಾದ ಈ ಒಡ್ಡಿಕೆಗೆ ಕಾರಣವೆಂದರೆ BPAಯನ್ನು ಆಹಾರ ಹಾಗು ಪಾನೀಯದಲ್ಲಿ ಬಳಸಲಾಗುವ ಮೆಟಲ್ ಕ್ಯಾನ್ ಗಳ ಆಂತರಿಕ ಒಳಪದರದ ವಸ್ತುವಾಗಿದೆ. ಇದನ್ನು ಆಹಾರದೊಂದಿಗೆ ಲೋಹವು ನೇರವಾದ ಸಂಪರ್ಕವನ್ನು ಹೊಂದುವುದರಿಂದ ರಕ್ಷಿಸಲು ಬಳಸಲಾಗುತ್ತದೆ. ಬಹುತೇಕವಾಗಿ ಮನುಷ್ಯನು ಆಹಾರದ ಮೂಲಕ ಇದಕ್ಕೆ ಒಡ್ಡಿಕೊಂಡರೆ, ಗಾಳಿ ಹಾಗು ಚರ್ಮದ ಹೀರಿಕೊಳ್ಳುವಿಕೆ ಮೂಲಕವೂ ಸಹ ಇದು ಉಂಟಾಗಬಹುದು. ಅಧಿಕ ಪ್ರಮಾಣದಲ್ಲಿ ಮುಕ್ತ ಶಾಖಧಾರಕ ಕಾಗದ ಹಾಗು ಕಾರ್ಬನ್ ರಹಿತ ಕಾಪಿ ಕಾಗದದಲ್ಲಿ ಕಂಡುಬರುತ್ತದೆ, ಇದು ರಾಳ ಅಥವಾ ಪ್ಲ್ಯಾಸ್ಟಿಕ್ ನ್ನು ಸುತ್ತುವರಿದ BPAಗಿಂತ ಒಡ್ಡಿಕೆಗೆ ಹೆಚ್ಚಿಗೆ ಲಭ್ಯವಿರುತ್ತದೆಂದು ನಿರೀಕ್ಷಿಸಲಾಗಿದೆ. ಶಾಖಧಾರಕ ಕಾಗದವನ್ನು ರಶೀತಿಗಳು, ಪ್ರದರ್ಶನ ಹಾಗು ಸಿನೆಮಾ ಟಿಕೆಟ್ ಗಳು, ಅಂಟುಚೀಟಿಗಳು, ಹಾಗು ವಿಮಾನದ ಟಿಕೆಟ್ ಗಳ ತಯಾರಿಕೆಯಲ್ಲಿ ಜನಪ್ರಿಯವಾಗಿ ಬಳಸಲಾಗುತ್ತದೆ. ಒಂದು ಸ್ವಿಸ್ ಅಧ್ಯಯನವು ೧೩ ಶಾಖಧಾರಕ ಮುದ್ರಣ ಕಾಗದಗಳಲ್ಲಿ ೧೧ 8 - 17 / Aರಷ್ಟು BPAಯನ್ನು ಹೊಂದಿರುವುದು ಪತ್ತೆಮಾಡಿದೆ. ಒಣಗಿದ ಬೆರಳು ಶಾಖಧಾರಕ ಕಾಗದದ ರಶೀತಿಯ ಸಂಪರ್ಕಕ್ಕೆ ಬಂದರೆ, ಸುಮಾರಾಗಿ 1 μg (0.2 – 6 μg) ತೋರು ಬೆರಳು ಹಾಗು ಮಧ್ಯದ ಬೆರಳಿಗೆ ವರ್ಗಾವಣೆಯಾಗುತ್ತದೆ. ಹಸಿಯಾದ ಅಥವಾ ಜಿಡ್ಡುಳ್ಳ ಬೆರಳುಗಳಿಗೆ ಸರಿಸುಮಾರು 10 timesಕ್ಕೂ ಅಧಿಕ ವರ್ಗಾವಣೆಯಾಗುತ್ತದೆ. ಒಡ್ಡಿಕೆ ನಂತರ ಬೆರಳುಗಳಿಂದ BPAಯನ್ನು 2 hoursರಷ್ಟು ತೆಗೆಯಲು ಸಾಧ್ಯ. ಚರ್ಮದ ಮೂಲಕ ಹೀರಿಕೊಳ್ಳುವ ಬಗ್ಗೆ ಕಡಿಮೆ ಕಳವಳವನ್ನು ಹೊಂದಲಾಗಿದ್ದರೆ, ಮುಕ್ತವಾದ ತಕ್ಷಣವೇ ಚರ್ಮಕ್ಕೆ ವರ್ಗಾವಣೆಯಾಗಬಹುದು ಕೈಗಳಲ್ಲಿ ಅದರ ಉಳಿಕೆಯನ್ನು ಅರಗಿಸಿಕೊಳ್ಳಬಹುದು. ನಡೆಸಿದ ಅಧ್ಯಯನಗಳು, ೧೯೮೮–೧೯೯೪ ನಡುವೆ ಸಂಗ್ರಹಿಸಲಾದ ಮೂತ್ರ ಮಾದರಿಗಳಲ್ಲಿ ೯೫%ನಷ್ಟು ವಯಸ್ಕರಲ್ಲಿ ಕಂಡುಬಂದಿತು ಹಾಗು ೨೦೦೩–೦೪ ನಡುವೆ ಪರೀಕ್ಷಿಸಲಾದಂತೆ ೯೩%ನಷ್ಟು ಮಕ್ಕಳಲ್ಲಿ ಹಾಗು ವಯಸ್ಕರಲ್ಲಿ ಕಂಡುಬಂತು. ಅತ್ಯಂತ ಸಂವೇದನಕಾರಿಯಾದ ಪ್ರಾಣಿಗಳ ಮೇಲಿನ ಅಧ್ಯಯನವು ಕಡಿಮೆ ಪ್ರಮಾಣಗಳಲ್ಲೂ ಸಹ ಪರಿಣಾಮವನ್ನು ಬೀರುತ್ತದೆಂದು ತೋರಿಸಿತು, ಆದರೆ ೫೦ µg/ಕೆಜಿ/ಪ್ರತಿದಿನಕ್ಕೆ ಒಡ್ಡಿಕೆಯು ಸುರಕ್ಷಿತವೆಂದು ಪರಿಗಣಿಸುತ್ತದೆ. ೨೦೦೯ರ ಒಂದು ಅಧ್ಯಯನವು, ಪಾಲಿಕಾರ್ಬೋನೆಟ್ ಬಾಟಲುಗಳಿಂದ ಕುಡಿಯಲಾದಂತಹ ನೀರು, ಮೂತ್ರೀಯ ಬಿಸ್ಫೆನಾಲ್ ಎ ಮಟ್ಟಗಳನ್ನು ಮೂರನೇ ಎರಡರಷ್ಟು ಭಾಗ ಹೆಚ್ಚಿಸುತ್ತದೆಂದು ಪತ್ತೆ ಮಾಡಿತು, ಇದು ೧.೨ ಮೈಕ್ರೋಗ್ರಾಂ/ಗ್ರಾಂ ಕ್ರೆಯಟಿನೈನ್ ನಿಂದ ೨ ಮೈಕ್ರೋ ಗ್ರಾಂಗಳು/ಗ್ರಾಂ ಕ್ರೆಯಟಿನೈನ್ ಗೆ ಹೆಚ್ಚಿಸಿತು. ಗ್ರಾಹಕ ಗುಂಪುಗಳು, ಬಿಸ್ಫೆನಾಲ್ ಎ ನ ಒಡ್ಡಿಕೆಯನ್ನು ತಗ್ಗಿಸಿಕೊಳ್ಳಲು ಇಚ್ಛಿಸುವವರು ಕ್ಯಾನ್ಡ್ ಆಹಾರ ಹಾಗು ಪಾಲಿಕಾರ್ಬೋನೆಟ್ ಪ್ಲ್ಯಾಸ್ಟಿಕ್ ಧಾರಕಗಳ ಬಳಕೆಯನ್ನು ನಿರ್ಬಂಧಿಸಬೇಕು( ಇತರ ಪ್ಲ್ಯಾಸ್ಟಿಕ್ ಗಳೊಂದಿಗೆ ಇದು ರಾಳದ ಗುರುತು ಸಂಕೇತ ಸಂಖ್ಯೆ ೭ರೊಂದಿಗೆ ಹಂಚಿಕೊಳ್ಳುತ್ತದೆ), ಬಿಸ್ಫೆನಾಲ್ ಎ ನಿಂದ ಪ್ಲಾಸ್ಟಿಕ್ ಮುಕ್ತವಾಗಿದೆಯೆಂಬ ಪ್ಯಾಕೇಜಿಂಗ್ ಸೂಚನೆಯನ್ನು ಹೊಂದಿರದ ಹೊರತೂ ಇದರ ಬಳಕೆಯನ್ನು ತಡೆಗಟ್ಟಬೇಕು. ದಿ ನ್ಯಾಷನಲ್ ಟಾಕ್ಸಿಕಾಲಜಿ ಪೇನಲ್, ಆಹಾರವನ್ನು ಬಿಸಿ ಮಾಡುವಾಗ ಪ್ಲಾಸ್ಟಿಕ್ ಧಾರಕಗಳಲ್ಲಿ ಮೈಕ್ರೋವೇವ್ ‌ಒಲೆಯಲ್ಲಿ ಕಾಯಿಸಿದ ಆಹಾರ, ಡಿಶ್ ವಾಷರ್ ನಲ್ಲಿ ಪ್ಲ್ಯಾಸ್ಟಿಕ್ ಹಾಕುವುದು, ಅಥವಾ ಸ್ರವಿಸುವುದನ್ನು ತಡೆಗಟ್ಟಲು ಗಡುಸಾದ ಸೋಪುಗಳ ಬಳಕೆಯನ್ನು ತಪ್ಪಿಸಬೇಕೆಂದು ಶಿಫಾರಸು ಮಾಡಿದೆ. USನಲ್ಲಿ ಸೋಡಾ, ಮನೆಯಿಂದ ಹೊರಗೆ ತಯಾರಾದ ಶಾಲೆಗಳ ಮಧ್ಯಾಹ್ನದ ಬೋಜನ, ಹಾಗು ಊಟಗಳು ಸಂಖ್ಯಾಶಾಸ್ತ್ರೀಯವಾಗಿ ಗಣನೀಯ ಅಧಿಕ ಮೂತ್ರೀಯ BPAನೊಂದಿಗೆ ಸಹಯೋಗವನ್ನು ಹೊಂದಿದೆ. BPAಯನ್ನು ನೀರಿನ ಪೈಪುಗಳಲ್ಲಿ ಇಪಾಕ್ಸಿ ರಾಳದ ಪದರವನ್ನು ರಚಿಸಲೂ ಸಹ ಬಳಸಲಾಗುತ್ತದೆ. ಹಳೆಯ ಕಟ್ಟಡಗಳಲ್ಲಿ, ಉದಾಹರಣೆಗೆ ಇಂತಹ ರಾಳದ ಒಳಪದರಗಳನ್ನು ಹಾಳಾಗುತ್ತಿರುವ ಬಿಸಿ ಮತ್ತು ತಣ್ಣಗಿನ ನೀರಿನ ಪೈಪ್‌ಗಳ ಬದಲಾವಣೆಯನ್ನು ತಪ್ಪಿಸಲು ಬಳಸಲಾಗುತ್ತದೆ. === ಭ್ರೂಣ ಮತ್ತು ಶೈಶವಾವಸ್ಥೆಯ ಒಡ್ಡಿಕೆಗಳು === ಮಕ್ಕಳು ವಯಸ್ಕರಿಗಿಂತ ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತಾರೆ. ಹೆಚ್ಚಿದ ಈ ಪ್ರಭಾವವು ಕ್ಸೆನೋಬಯೋಟಿಕ್ಸ್ ನಿವಾರಿಸುವ ಅವರ ಸಾಮರ್ಥ್ಯದಲ್ಲಿ ಕುಂಠಿತವನ್ನು ಬಹುಮಟ್ಟಿಗೆ ಆಧರಿಸಿದೆ ಮತ್ತು ಬಿಪಿಎಗೆ ಅವರು ಹೆಚ್ಚಿಗೆ ಒಡ್ಡಿಕೊಳ್ಳುವ ದಿನನಿತ್ಯದ ಅಂದಾಜನ್ನು, ವಯಸ್ಕರಿಗೆ ಹೋಲಿಸಿದರೆ ತೂಕಕ್ಕೆ ಹೊಂದಿಕೆಯಾಗುವಂತೆ ಆಧರಿಸಿದೆ. ಇಂತಹ ಮಾದರಿಯ ಒಡ್ಡಿಕೆ ಸನ್ನಿವೇಶಗಳಲ್ಲಿ ಎಳೆಯ ಮಕ್ಕಳಲ್ಲಿ ಮೂತ್ರದ ಸಾಂದ್ರೀಕರಣಗಳು ವಯಸ್ಕರಿಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ದ್ರವದ ಪಾಕ ಸೂತ್ರಕ್ಕೆ ಅನುಸಾರವಾದ ಆಹಾರವನ್ನು ಉಣಿಸಲಾಗುವ ಶಿಶುಗಳು ಹೆಚ್ಚು ಒಡ್ಡಿಕೆಗೆ ಒಳಗಾಗುತ್ತಾರೆ. ಪಾಲಿಕಾರ್ಬೊನೇಟ್ ಸೀಸೆಗಳಿಂದ ದ್ರವಾಹಾರವನ್ನು ಉಣಿಸಿದರೆ ಪ್ರತಿ ದಿನಕ್ಕೆ ದೇಹ ತೂಕದ ಪ್ರತೀ ಕೇಜಿಗೆ ೧೩ ಮೈಕ್ರೋಗ್ರಾಂಗಳಷ್ಟು ಬಿಸ್ಫೆನಾಲ್ ಎಯನ್ನು ಸೇವಿಸುತ್ತಾರೆ(μg/ಕೆಜಿ/ದಿನ; ಕೆಳಗಿನ ಕೋಷ್ಠಕ ನೋಡಿ). ಅಮೆರಿಕ ಮತ್ತು ಕೆನಡಾದಲ್ಲಿ, ಶಿಶುಗಳ ದ್ರವಾಹಾರ ಸೂತ್ರದಲ್ಲಿ ೦.೪೮ರಿಂದ ೧೧ng/ ಸಾಂದ್ರೀಕರಣದಲ್ಲಿ ವ್ಯತ್ಯಾಸ ಹೊಂದಿರುತ್ತದೆ. ಮಕ್ಕಳ ಪುಡಿ ಸೂತ್ರದಲ್ಲಿ ಅಪರೂಪದಲ್ಲಿ ಕಾಣಸಿಗುತ್ತದೆ(೧೪ರಲ್ಲಿ ೧ ಮಾತ್ರ). ಸ್ತನದ ಹಾಲು ಶಿಶುಗಳಿಗೆ ಪೌಷ್ಠಿಕದ ಗರಿಷ್ಠ ಮೂಲವಾಗಿದೆ. ಆದಾಗ್ಯೂ, ಸ್ತನ್ಯ ಪಾನ ಆಯ್ಕೆಯಾಗದಿದ್ದರೆ, ..ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ &ಹ್ಯೂಮನ್ ಸರ್ವೀಸಸ್ () ಶಿಶುವಿನ ಸೂತ್ರ ಮತ್ತು ಆಹಾರದಿಂದ ಉತ್ತಮ ಪೌಷ್ಠಿಕಾಂಶದ ಸ್ಥಿರವಾದ ಮೂಲದ ಅನುಕೂಲವು ಒಡ್ಡಿಕೆಯ ಸಂಭವನೀಯ ಅಪಾಯವನ್ನು ಮೀರಿಸುತ್ತದೆ. ಆಸ್ಟ್ರಿಯನ್, ಸ್ವಿಸ್ ಮತ್ತು ಜರ್ಮನ್ ಜನಸಂಖ್ಯೆ ಪಾಲಿಕಾರ್ಬೊನೇಟ್() ಶಿಶುವಿನ ಸೀಸೆಗಳು ಶಿಶುಗಳ ಒಡ್ಡಿಕೆಗೆ ಮತ್ತು ವಯಸ್ಕರು ಮತ್ತು ಹದಿಹರೆಯದವರಿಗೆ ಸಿದ್ಧಗೊಳಿಸಿದ ಆಹಾರ(ಕ್ಯಾನಡ್ ಫುಡ್) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆರ್ಥಿಕ ನೆರವು ನೀಡಿದ ೨೦೦೯ ಸಣ್ಣ ಅಮೆರಿಕ ಅಧ್ಯಯನವು ಪರೀಕ್ಷೆ ಮಾಡಿದ ೧೦ ಹೊಕ್ಕುಳಬಳ್ಳಿಗಳ ರಕ್ತದ ಪೈಕಿ ೯ಹೊಕ್ಕುಳ ಬಳ್ಳಿಗಳ ರಕ್ತದಲ್ಲಿ ಸರಾಸರಿ ೨.೮ / ಯನ್ನು ಗುರುತಿಸಿದೆ. == ದೇಹದಲ್ಲಿ ಔಷಧಗಳ ಪರಿಣಾಮದ ಅಧ್ಯಯನ(ಫಾರ್ಮಕೊಕೈನೆಟಿಕ್ಸ್) == ಮಾನವರಿಗೆ ಶರೀರವೈಜ್ಞಾನಿಕ-ಆಧಾರದ ಔಷಧಗಳ ಪರಿಣಾಮದ ಅಧ್ಯಯನ (ಫಾರ್ಮಕೊಕೈನೆಟಿಕ್)() ಮಾದರಿಯ ಬಗ್ಗೆ ವಿಜ್ಞಾನಿಗಳ ನಡುವೆ ಯಾವುದೇ ಒಮ್ಮತಾಭಿಪ್ರಾಯವಿಲ್ಲ. ಜೀವಿಯ ಮೇಲೆ ಪರಿಣಾಮಗಳು ಎಷ್ಟು ಮುಕ್ತ ಲಭ್ಯವಿದೆ ಮತ್ತು ಜೀವಕೋಶಗಳು ಎಷ್ಟು ಕಾಲದವರೆಗೆ ಅದಕ್ಕೆ ಒಡ್ಡಿಕೊಂಡಿವೆ ಎನ್ನುವುದನ್ನು ಅವಲಂಬಿಸಿದೆ. ಪಿತ್ತಜನಕಾಂಗದಲ್ಲಿ ಗ್ಲುಕುರೊನೈಡೇಷನ್‌‌, ಗ್ಲುಕ್ಯುರೊನಿಕ್ ಆಮ್ಲದ ಜತೆ ಒಗ್ಗೂಡಿಕೆಯಿಂದಾಗಿ ಮೆಟಾಬಲೈಟ್ -ಗ್ಲುಕೊರೋನೈಡ್ () ರೂಪುಗೊಳ್ಳುತ್ತದೆ. ಇದು ಮುಕ್ತ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ. ಆದಾಗ್ಯೂ, ಯು ಬೆಟಾ-ಗ್ಲುಕೊರೊನೈಡೇಸ್‌ನಿಂದ ಬೇರ್ಪಡುತ್ತದೆ.ಇದು ಜರಾಯು ಮತ್ತು ಇತರ ಅಂಗಾಂಶಗಳಲ್ಲಿ ಅತೀ ಸಾಂದ್ರೀಕರಣದಲ್ಲಿ ಉಪಸ್ಥಿತವಿರುವ ಕಿಣ್ವವಾಗಿದೆ. ಮುಕ್ತ ಯನ್ನು ಸಲ್ಫೇಷನ್ ಮೂಲಕ ಕೂಡ ನಿಷ್ಕ್ರಿಯಗೊಳಿಸಬಹುದು. ಈ ಪ್ರಕ್ರಿಯೆಯನ್ನು ಆರಿಲ್‌ಸಲ್ಫಾಟೇಸ್ Cಯಿಂದ ಹಿಂದಿರುಗಿಸಬಹುದು. ಜರಾಯು -ಗ್ಲೈಕೊಪ್ರೊಟೀನ್ ಜರಾಯುವಿನಿಂದ ಯನ್ನು ಹೊರಸೂಸಬಹುದು ಎಂದು ೨೦೧೦ರ ಪ್ರನಾಳದ ಅಧ್ಯಯನ ತಿಳಿಸಿದೆ. ಪರಿಣಾಮಗಳನ್ನು ಅಧ್ಯಯನ ಮಾಡಲು ಉತ್ತಮ ವಿಧಾನಗಳು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವಿಜ್ಞಾನಿಗಳ ನಡುವೆ ಪ್ರಸಕ್ತ ಮಾತುಕತೆಯಲ್ಲಿದೆ. ೮೦+ಬಯೊಮಾನಿಟರಿಂಗ್ ಅಧ್ಯಯನಗಳ ೨೦೧೦ರ ಪುನರ್ವಿಮರ್ಶೆಯಲ್ಲಿ ಸಾಮಾನ್ಯ ಜನಸಂಖ್ಯೆಯು ಆಂತರಿಕವಾಗಿ ರಾಸಾಯನಿಕವಾಗಿ ಒಂದುಗೂಡಿರದ ಗಮನಾರ್ಹ ಮೊತ್ತದ ಗೆ ಒಡ್ಡಿಕೊಂಡಿರುತ್ತದೆ.(/ ರಕ್ತ ವ್ಯಾಪ್ತಿಯಲ್ಲಿ) ೨೦ಮಾದರಿಗಳ ಮೇಲೆ /MSಬಳಸುವ ಮೂಲಕ, ಯನ್ನು ೧೦೦%ಮೂತ್ರದ ಮಾದರಿಗಳಲ್ಲಿ ಸರಾಸರಿ ೧.೨೫ / ಮತ್ತು ರಕ್ತದ ಮಾದರಿಗಳಲ್ಲಿ ೧೦%ನೊಂದಿಗೆ ಗುರುತಿಸಲಾಗಿದೆ( ೦.೫ /). ೨೦೦೯ರ ಸಂಶೋಧನೆಯಲ್ಲಿ, ನ್ಯಾಪ್ರೊಕ್ಸೆನ್, ಸ್ಯಾಲಿಸಿಲಿಕ್ ಆಮ್ಲ, ಕಾರ್ಬಾಮಜೆಪೈನ್ ಮತ್ತು ಮೆಫೆನ್ಯಾಮಿಕ್ ಆಮ್ಲ ವು ಪ್ರನಾಳ ದಲ್ಲಿ ಗಮನಾರ್ಹವಾಗಿ ಗ್ಲುಕೊರೋನೈಡೇಷನ್‌ಗೆ ಪ್ರತಿಬಂಧಿಸುತ್ತದೆ. ಇಲಿಗಳ ಭ್ರೂಣಗಳನ್ನು ಕುರಿತ ೨೦೧೦ರ ಅಧ್ಯಯನದಲ್ಲಿ ಜೆನಿಸ್ಟೈನ್ ಅಭಿವೃದ್ಧಿಯ ವಿಷತ್ವವನ್ನು ಹೆಚ್ಚಿಸಬಹುದು. == ಪರಿಸರ ಅಪಾಯ == ಸಾಮಾನ್ಯವಾಗಿ, ಜಲಜೀವಿಗಳಲ್ಲಿ ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆಂದು ಅಧ್ಯಯನಗಳು ತೋರಿಸಿವೆ. ತಿಳಿನೀರು ಜೀವಿಗಳಲ್ಲಿ ಮೀನು ಅತ್ಯಂತ ಸೂಕ್ಷ್ಮ ಪ್ರಭೇದವಾಗಿ ಕಾಣುತ್ತದೆ. ಮೀನು, ಜಲಚರ ಅಕಶೇರುಕಗಳು, ಉಭಯಚರಗಳು ಮತ್ತು ಸರಿಸೃಪಗಳಲ್ಲಿ ಎಂಡೋಕ್ರೈನ್ ಸಂಬಂಧಿತ ಪರಿಣಾಮಗಳು ತೀವ್ರ ವಿಷತ್ವಕ್ಕೆ ಅಗತ್ಯಕ್ಕಿಂತ ಕಡಿಮೆಯಾದ ಪರಿಸರೀಯ ಪ್ರಸ್ತುತ ಒಡ್ಡಿಕೆ ಮಟ್ಟದಲ್ಲಿ ವರದಿಯಾಗಿದೆ. ಎಂಡೊಕ್ರೈನ್ ಸಂಬಂಧಿತ ಪರಿಣಾಮಗಳ ಮೌಲ್ಯಗಳಲ್ಲಿ ವ್ಯಾಪಕ ವ್ಯತ್ಯಾಸವಿದೆ. ಆದರೆ ಅನೇಕ ೧μg/ ೧ / ವ್ಯಾಪ್ತಿಯಲ್ಲಿರುತ್ತವೆ. ನೇರವಾಗಿ ಪರಿಸರವನ್ನು ಮಾಲಿನ್ಯಗೊಳಿಸಬಹುದು ಅಥವಾ ಯನ್ನು ಹೊಂದಿರುವ ಉತ್ಪನ್ನಗಳ ಅವನತಿಯಿಂದ ಮಾಲಿನ್ಯಗೊಳಿಸಬಹುದು. ಉದಾಹರಣೆಗೆ ಸಾಗರಜನ್ಯ ಪ್ಲಾಸ್ಟಿಕ್ ಕಸ. ಪರಸರೀಯ ಮಾಲೀನ್ಯಕಾರಕವಾಗಿ ಈ ಸಂಯುಕ್ತವು ಬ್ಯಾಕ್ಟೀರಿಯ ಕೂಡುಜೀವಿ ಸೈನೋರಿಜಾಂಬಿಯಂ ಮೆಲಿಲೋಟಿ ಜತೆ ಸಂಬಂಧ ಹೊಂದಿದ ದ್ವಿದಳ ಧಾನ್ಯದ ಸಸ್ಯಗಳ ಬೇರುಗಳಲ್ಲಿ ಸಾರಜನಕ ಸ್ಥಿರೀಕರಣದೊಂದಿಗೆ ಹಸ್ತಕ್ಷೇಪ ನಡೆಸುತ್ತದೆ. ೧-೧೦ದಿನಗಳ ಮಣ್ಣಿನಲ್ಲಿ ಅರ್ಧ-ಜೀವನ(ಕೊಳೆಯುವ ವಸ್ತು ಅರ್ಧದಷ್ಟು ಕುಂಠಿತವಾಗಲು ಕಾಲಾವಧಿ)ದ ನಡುವೆಯೂ,ಎಲ್ಲ ಕಡೆ ಉಪಸ್ಥಿತವಿರುವ ಅದರ ಸ್ಥಿತಿಯು ಅದನ್ನು ಮಲಿನಕಾರಿಯಾಗಿಸಿದೆ. ಪರಿಸರ ಕೆನಡಾದ ಪ್ರಕಾರ, ಪೂರ್ವಭಾವಿ ಅಂದಾಜು ಕಡಿಮೆ ಪ್ರಮಾಣಗಳಲ್ಲಿ ಬಿಸ್ಫೆನಾಲ್ ಎ ಮೀನು ಮತ್ತು ಇತರ ಜೀವಿಗಳಿಗೆ ಕಾಲಾವಧಿಯಲ್ಲಿ ಹಾನಿಮಾಡಬಹುದು. ಪೌರ ತಾಜ್ಯ ನೀರಿನಲ್ಲಿ ಇದು ಪ್ರಸಕ್ತ ಕಂಡುಬರುತ್ತದೆಂದು ಅಧ್ಯಯನಗಳು ತಿಳಿಸಿವೆ. ಪ್ಲಾಸ್ಟೀಕಾರಕಗಳ ಜೈವಿಕ ಪರಿಣಾಮಗಳನ್ನು ಕುರಿತ ೨೦೦೯ರ ಪುನರ್ಪರಿಶೀಲನೆಯನ್ನು ರಾಯಲ್ ಸೊಸೈಟಿ ಪ್ರಕಟಿಸಿತು. ಇದು ಮಣ್ಣುಹುಳುಗಳು(ಜಲಚರ ಮತ್ತು ಭೂಚರ), ಮೃದ್ವಂಗಿಗಳು,ಕಠಿಣಚರ್ಮೀಯ, ಕೀಟಗಳು, ಮೀನು ಮತ್ತು ಉಭಯಚರಿಗಳ ಮೇಲಿನ ಗಮನದೊಂದಿಗೆ, ಎಲ್ಲ ಅಧ್ಯಯನದ ಪ್ರಾಣಿಗಳ ಗುಂಪುಗಳ ಸಂತಾನೋತ್ಪತ್ತಿಯಲ್ಲಿ ಪರಿಣಾಮ ಉಂಟುಮಾಡಿದ್ದನ್ನು ತೋರಿಸಿದೆ. ಕಠಿಣಚರ್ಮೀಯಗಳಲ್ಲಿ ಮತ್ತು ಉಭಯಚರಿಗಳಲ್ಲಿ ಅವುಗಳ ಬೆಳವಣಿಗೆ ಕುಂಠಿತಗೊಳಿಸಿವೆ ಮತ್ತು ಆನುವಂಶಿಕ ವಿಸ್ಮೃತಿಯನ್ನು ಉಂಟುಮಾಡುತ್ತದೆ. ಕೆನಡಾದ ಎರಡು ನದಿಗಳ ದೊಡ್ಡ ೨೦೧೦ರ ಅಧ್ಯಯನವು ಬಿಸ್ಫೆನಾಲ್ ಎಸೇರಿದಂತೆ ಹಾರ್ಮೋನ್ ರೀತಿಯ ರಾಸಾಯನಿಕಗಳಿಂದ ಮಾಲಿನ್ಯಗೊಂಡ ಪ್ರದೇಶಗಳಲ್ಲಿ ನಿರ್ದಿಷ್ಟ ಹೆಣ್ಣು ಮೀನುಗಳು ಅವುಗಳ ಸಂಖ್ಯೆಯ ಪೈಕಿ ಶೇಕಡ ೮೫ ಒಳಗೊಂಡಿದ್ದರೆ, ಮಾಲಿನ್ಯರಹಿತ ಪ್ರದೇಶಗಳಲ್ಲಿ ಹೆಣ್ಣುಮೀನುಗಳು ಶೇಕಡ ೫೫ರಷ್ಟು ಒಳಗೊಂಡಿವೆ. == ಸರ್ಕಾರ ಮತ್ತು ಕೈಗಾರಿಕೆ ಪ್ರತಿಕ್ರಿಯೆ == === ವಿಶ್ವ ಆರೋಗ್ಯ ಸಂಸ್ಥೆ === ಕಡಿಮೆ ಪ್ರಮಾಣದ ನ ಒಡ್ಡಿಕೆಯಿಂದ ವಿಶೇಷವಾಗಿ ನರಮಂಡಲ ಮತ್ತು ನಡವಳಿಕೆ ಮೇಲೆ ಸಂಭವನೀಯ ಪ್ರತಿಕೂಲ ಆರೋಗ್ಯದ ಪರಿಣಾಮಗಳ ಬಗ್ಗೆ ಮತ್ತು ಅತೀ ಎಳೆಯ ಮಕ್ಕಳಲ್ಲಿ ಒಡ್ಡಿಕೆ ವ್ಯತ್ಯಾಸಗಳ ಅನಿಶ್ಚಿತತೆ ಬಗ್ಗೆ ವಾದಿಸುತ್ತಾ, ಸುರಕ್ಷತೆಯ ಬಗ್ಗೆ ಅಂದಾಜು ಮಾಡಲು ತಜ್ಞರ ಸಮಾಲೋಚನೆಯನ್ನು ಆಯೋಜಿಸುವುದಾಗಿ ನವೆಂಬರ್ ೨೦೦೯ರಲ್ಲಿ ಪ್ರಕಟಿಸಿತು. ತಜ್ಞ ಸಮಿತಿ ಬಿಸ್ಫೆನಾಲ್-ಎ ಬಳಕೆಯ ನಿಷೇಧ ಅಥವಾ ಸೀಮಿತಗೊಳಿಸುವ ಬಗ್ಗೆ ಯಾವುದೇ ಹೊಸ ನಿಯಮಗಳಿಗೆ ಶಿಫಾರಸು ಮಾಡಲಿಲ್ಲ; "ಸಾರ್ವಜನಿಕ ಆರೋಗ್ಯ ಕ್ರಮಗಳ ಆರಂಭವು ಅಪಕ್ವವೆಂದು ಹೇಳಿಕೆ ನೀಡಿತು." === ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ === ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ಆಹಾರ ಸುರಕ್ಷತೆ ಪ್ರಾಧಿಕಾರ(ಫುಡ್ ಸ್ಟಾಂಡರ್ಡ್ಸ್ ಆಸ್ಟ್ರೇಲಿಯ ನ್ಯೂಜಿಲೆಂಡ್) ಬಿಸ್ಫೆನಾಲ್ ಎ ಶಿಶುವಿಗೆ ಹಾಲುಣಿಸುವ ಸೀಸೆಗಳಲ್ಲಿ ಉತ್ಪಾದಕರ ಸೂಚನೆಗಳನ್ನು ಪಾಲಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಕಾಣುವುದಿಲ್ಲವೆಂದು ತಿಳಿಸಿತು. ಒಡ್ಡಿಕೆ ಪ್ರಮಾಣಗಳು ಅತೀ ಕಡಿಮೆಯಾಗಿದ್ದು ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುವುದಿಲ್ಲ. ಶಿಶು ಸೀಸೆಗಳಲ್ಲಿ ಬಳಕೆಯನ್ನು ನಿಲ್ಲಿಸಲು ಸಾಗರೋತ್ತರ ಉತ್ಪಾದಕರ ಕ್ರಮವು ಸ್ವಯಂಪ್ರೇರಿತ ಕ್ರಮವಾಗಿದ್ದು, ನಿಯಂತ್ರಕರ ನಿರ್ದಿಷ್ಟ ಕ್ರಮದ ಫಲಿತಾಂಶವಲ್ಲ ಎಂದು ಅದು ಹೇಳಿದೆ.[೧] 9 2010 ವೇಬ್ಯಾಕ್ ಮೆಷಿನ್ ನಲ್ಲಿ. ತಂದೆತಾಯಿಗಳಿಗೆ ಯಾವುದೇ ಕಳವಳವಿದ್ದರೆ ಗಾಜಿನ ಶಿಶುವಿನ ಸೀಸೆಗಳನ್ನು ಬಳಸುವಂತೆ ಅದು ಸೂಚಿಸಿದೆ. === ಕೆನಡಾ === ೨೦೦೮ ಏಪ್ರಿಲ್‌ನಲ್ಲಿ ಹೆಲ್ತ್ ಕೆನಡಾ, ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ನಿರೀಕ್ಷಿಸಲಾಗಿಲ್ಲ, ಆಹಾರ ಸೂತ್ರ ಉಣಿಸುವ ಶಿಶುಗಳಿಗೆ ಸುರಕ್ಷತೆಯ ಅಂಚು ತೀರಾ ಕಡಿಮೆ ಎಂದು ತೀರ್ಮಾನಿಸಿದೆ ಮತ್ತು ರಾಸಾಯನಿಕವನ್ನು ಮಾನವ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ವಿಷಕಾರಿ ಎಂದು ವರ್ಗೀಕರಿಸುವ ಪ್ರಸ್ತಾಪ ಮಾಡಿದೆ. ಈ ಅಂದಾಜಿನ ಬಿಡುಗಡೆ ನಂತರ, ಕೆನಡಾದ ಆರೋಗ್ಯ ಸಚಿವ ಟೋನಿ ಕ್ಲೆಮೆಂಟ್, ಸುರಕ್ಷತೆಯ ಕಾಳಜಿಗಳ ಕಾರಣದಿಂದ ಬಿಸ್ಫೆನಾಲ್ ಎ ಹೊಂದಿರುವ ಪಾಲಿಕಾರ್ಬೊನೇಟ್ ಸೀಸೆಗಳ ಆಮದು, ಮಾರಾಟ ಮತ್ತು ಜಾಹೀರಾತನ್ನು ನಿಷೇಧಿಸುವ ಕೆನಡಾದ ಇಚ್ಛೆಯನ್ನು ಪ್ರಕಟಿಸಿದರು ಮತ್ತು ಲೋಹದ ಕ್ಯಾನ್‌ಗಳಲ್ಲಿ ಪ್ಯಾಕ್ ಮಾಡಿದ ಶಿಶುವಿನ ಆಹಾರ ಸೂತ್ರದ ಮಾಲಿನ್ಯವನ್ನು ಕುಂಠಿತಗೊಳಿಸುವ ಮಾರ್ಗಗಳನ್ನು ಶೋಧಿಸುವಂತೆ ಹೇಳಿದರು. ಮಾನವರ ಒಡ್ಡಿಕೆಯು ಅಸುರಕ್ಷತೆಯೆಂದು ನಂಬಿದ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿದೆ ಮತ್ತು ಆಹಾರ ಸೂತ್ರ ಉಣಿಸುವ ಶಿಶುಗಳಿಗೆ ಸುರಕ್ಷತೆಯ ಅಂಚು ಸಾಕಷ್ಟು ಎತ್ತರದಲ್ಲಿಲ್ಲ ಎಂದು ಏಜೆನ್ಸಿ ತೀರ್ಮಾನಿಸಿತು. ಇದೇ ಸಮಯದಲ್ಲಿ, ತನ್ನ ಎಲ್ಲ ಕೆನಡಾದ ಅಂಗಡಿಗಳಲ್ಲಿ ಬಿಸ್ಫೆನಾಲ್ ಎ ಹೊಂದಿರುವ ಆಹಾರ ಧಾರಕಗಳು, ನೀರು ಮತ್ತು ಶಿಶುವಿನ ಸೀಸೆಗಳು ಸಿಪ್ಪಿ ಕಪ್‌ಗಳು ಮತ್ತು ಉಪಶಾಮಕಗಳ ಮಾರಾಟಗಳನ್ನು ತಕ್ಷಣವೇ ನಿಲ್ಲಿಸುವುದಾಗಿ ಮತ್ತು ೨೦೦೯ರ ಪೂರ್ವದಲ್ಲಿ ಅದರಿಂದ ತಯಾರಿಸಿದ ಶಿಶುವಿನ ಸೀಸೆಗಳನ್ನು ಅಮೆರಿಕದಲ್ಲಿ ಅಂಗಡಿಗಳಲ್ಲಿ ಹಂತ ಹಂತವಾಗಿ ತೆಗೆಯುವುದಾಗಿ ವಾಲ್-ಮಾರ್ಟ್ ಪ್ರಕಟಿಸಿತು. ನಾಲ್ಜೀನೆ ತನ್ನ ಉತ್ಪನ್ನಗಳಲ್ಲಿ ರಾಸಾಯನಿಕದ ಬಳಕೆಯನ್ನು ನಿಲ್ಲಿಸುವುದಾಗಿ ಪ್ರಕಟಿಸಿತು ಮತ್ತು ಟಾಯ್ಸ್--ಅಸ್ ಅದರಿಂದ ತಯಾರಿಸಿದ ಶಿಶುವಿನ ಸೀಸೆಗಳ ಮಾರಾಟ ನಿಲ್ಲಿಸುವುದಾಗಿ ತಿಳಿಸಿತು. ತರುವಾಯದ ಸುದ್ದಿ ವರದಿಗಳು ಅನೇಕ ಚಿಲ್ಲರೆಮಾರಾಟಗಾರರು ಪಾಲಿಕಾರ್ಬೊನೇಟ್ ಕುಡಿಯುವ ಉತ್ಪನ್ನಗಳನ್ನು ತಮ್ಮ ಕಪಾಟುಗಳಿಂದ ತೆಗೆಯುವುದನ್ನು ತೋರಿಸಿತು. ಫೆಡರಲ್ ಸರ್ಕಾರವು ೨೦೦೮ಅಕ್ಟೋಬರ್‌ನಲ್ಲಿ ಅಪಾಯಕಾರಿ ವಸ್ತು ಎಂದು ಘೋಷಿಸುವ ಪ್ರಸ್ತಾಪ ಮಾಡಿತು ಮತ್ತು ಅದನ್ನು ವಿಷಕಾರಿ ವಸ್ತುಗಳ ಪಟ್ಟಿಯಲ್ಲಿ ಆಗಿನಿಂದ ಇರಿಸಿದೆ. ಆರೋಗ್ಯ ಅಧಿಕಾರಿಗಳು ಕೆನಡಾ ಗೆಜೆಟ್ ‌ನಲ್ಲಿ ಬರೆಯುತ್ತಾ, ಬಿಸ್ಫೆನಾಲ್ ಎ ಪರಿಸರಕ್ಕೆ ಒಂದು ಪ್ರಮಾಣದಲ್ಲಿ ಅಥವಾ ಸಾಂದ್ರೀಕರಣದಲ್ಲಿ ಅಥವಾ ಪರಿಸ್ಥಿತಿಗಳಲ್ಲಿ ಪ್ರವೇಶಿಸುವ ವಸ್ತು ಎಂದು ಪರಿಗಣಿಸಬೇಕು ಮತ್ತು ಕೆನಡಾದಲ್ಲಿ ಮಾನವ ಜೀವನಕ್ಕೆ ಅಥವಾ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಅಥವಾ ಮಾಡಬಹುದು ಎಂದು ತೀರ್ಮಾನಿಸಿತು. ಆರೋಗ್ಯ ಮತ್ತು ಪರಿಸರದ ಫೆಡರಲ್ ಸಚಿವಾಲಯಗಳು ಹೊಂದಿರುವ ಪಾಲಿಕಾರ್ಬೊನೇಟ್ ಶಿಶುವಿನ ಸೀಸೆಗಳ ಜಾಹೀರಾತು ಮತ್ತು ಮಾರಾಟಗಳು ಮತ್ತು ಆಮದನ್ನು ನಿರ್ಬಂಧಿಸಲು ಕೋರುವುದಾಗಿ ಪ್ರಕಟಿಸಿವೆ. ೨೦೦೮ರ ಅಕ್ಟೋಬರ್ ೧೮ರಂದು ಬಿಡುಗಡೆ ಮಾಡಿದ ಅದರ ಹೇಳಿಕೆಯಲ್ಲಿ ಹೆಲ್ತ್ ಕೆನಡಾ, ನವಜಾತ ಶಿಶುಗಳಿಗೆ ಮತ್ತು ಶಿಶುಗಳಿಗೆ ಬಿಸ್ಫೆನಾಲ್ ಎ ಪರಿಣಾಮಗಳನ್ನು ಉಂಟುಮಾಡುವುದಕ್ಕಿಂತ ಕಡಿಮೆ ಮಟ್ಟದಲ್ಲಿದೆ ಎಂದು ಗಮನಿಸಿತು ಮತ್ತು ಜನಸಾಮಾನ್ಯರು ಕಳವಳಪಡಬೇಕಿಲ್ಲ ಎಂದು ತಿಳಿಸಿತು. ಪರಿಸರ ಕೆನಡಾ ಬಿಸ್ಫೆನಾಲ್ ಎ ಯನ್ನು ೨೦೧೦ ಸೆಪ್ಟೆಂಬರ್‌ನಲ್ಲಿ "ವಿಷಕಾರಿ ವಸ್ತು" ಎಂದು ಪಟ್ಟಿ ಮಾಡಿತು. === ಯುರೋಪ್‌ === ==== ಐರೋಪ್ಯ ಒಕ್ಕೂಟ ==== ಯುರೋಪಿಯನ್ ಕಮೀಷನ್ ಮತ್ತು ಯುರೋಪಿಯನ್ ಫುಡ್ ಸೇಫ್ಟಿ ಅಥೋರಿಟಿ () ೨೦೦೮ ಜೂನ್‌ನಲ್ಲಿ ಪ್ರಕಟಿಸಿದ ಪರಿಷ್ಕೃತ ೨೦೦೮ ಐರೋಪ್ಯ ಒಕ್ಕೂಟದ ಅಪಾಯ ಅಂದಾಜು ವರದಿ Aಆಧಾರಿತ ಉತ್ಪನ್ನಗಳು, ಉದಾಹರಣೆಗೆ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್ ಮತ್ತು ಎಪಾಕ್ಸಿ ರೆಸಿನ್‌ಗಳು ಗ್ರಾಹಕರಿಗೆ ಮತ್ತು ಪರಿಸರಕ್ಕೆ ಇಚ್ಛೆಯಂತೆ ಬಳಸಿದರೆ ಸುರಕ್ಷಿತವಾಗಿರುತ್ತದೆಂದು ತೀರ್ಮಾನಿಸಿತು. ೨೦೦೮ ಅಕ್ಟೋಬರ್‌ನಲ್ಲಿ, ಲ್ಯಾಂಗ್ ಸ್ಟಡಿಯನ್ನು ಪ್ರಕಟಿಸಿದ ನಂತರ, ಹೇಳಿಕೆಯೊಂದನ್ನು ಪ್ರಕಟಿಸಿ,0.05 / ದೇಹತೂಕದ ಗೆ ಪ್ರಸಕ್ತ ಸಹನೀಯ ದಿನನಿತ್ಯದ ಸೇವನೆ () ಮಟ್ಟವನ್ನು ಪರಿಷ್ಕರಿಸಲು ಅಧ್ಯಯನವು ಯಾವುದೇ ಆಧಾರವನ್ನು ಒದಗಿಸಿಲ್ಲ ಎಂದು ತೀರ್ಮಾನಿಸಿತು. BPAಸೇರಿದಂತೆ ಅಂತಃಸ್ರಾವಕ ಅಡ್ಡಿಗಳ ಐರೋಪ್ಯ ಅಪಾಯ ಅಂದಾಜು ಪ್ರಕ್ರಿಯೆಗಳನ್ನು ೨೦೦೯ರ ವೈಜ್ಞಾನಿಕ ಅದ್ಯಯನ ಟೀಕಿಸಿತು. ಅಂತಃಸ್ರಾವದ ಅಡ್ಡಿಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ತೋರಿಸುವ ಇತ್ತೀಚಿನ ಅಧ್ಯಯನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ೨೦೦೯ರ ಡಿಸೆಂಬರ್ ೨೨ರಂದು EUಪರಿಸರ ಸಚಿವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. ೨೦೧೦ರ ಸೆಪ್ಟೆಂಬರ್‌ನಲ್ಲಿ ಐರೋಪ್ಯ ಆಹಾರ ಸುರಕ್ಷತೆ ಪ್ರಾಧಿಕಾರ( ()ತನ್ನ ಇತ್ತೀಚಿನ ವೈಜ್ಞಾನಿಕ ಅಭಿಪ್ರಾಯವನ್ನು ಪ್ರಕಟಿಸಿತು. ಇದು "ಇತ್ತೀಚಿನ ವಿಷತ್ವದ ಅಂಕಿಅಂಶದ ಸಮಗ್ರ ಮೌಲ್ಯಮಾಪನವು ಪ್ರಸಕ್ತ ಪರಿಷ್ಕರಣೆಗೆ ಕರೆನೀಡುವ ಯಾವುದೇ ಹೊಸ ಅಧ್ಯಯನವನ್ನು ಗುರುತಿಸಲಾಗಿಲ್ಲ ಎಂದು ತೀರ್ಮಾನಿಸಿದೆ" ಎನ್ನುವುದನ್ನು ಆಧರಿಸಿದೆ. ಸಂಭವನೀಯ ವಿಷಶಾಸ್ತ್ರೀಯ ಪ್ರಸ್ತುತತೆ ಕುರಿತ BPAಸಂಬಂಧಿತ ಪರಿಣಾಮಗಳನ್ನು ಬೆಳೆಯುತ್ತಿರುವ ಪ್ರಾಣಿಗಳನ್ನು ಕುರಿತ ಕೆಲವು ಅಧ್ಯಯನಗಳು ಸೂಚಿಸಿರುವುದಾಗಿ ಸಮಿತಿ ಗಮನಿಸಿದೆ. ವಿಶೇಷವಾಗಿ ಮೆದುಳಿನಲ್ಲಿ ಜೈವಿಕರಾಸಾಯನಿಕ ಬದಲಾವಣೆಗಳು, ಪ್ರತಿರಕ್ಷಿತ-ಸರಿಹೊಂದುವ ಪರಿಣಾಮಗಳು ಮತ್ತು ಸ್ತನ ಗೆಡ್ಡೆಗಳ ಹೆಚ್ಚಿನ ಆಸ್ಪದ. ಆದರೆ ಈ ಅಧ್ಯಯನಗಳಲ್ಲಿ ಅನೇಕ ನ್ಯೂನತೆಗಳಿದ್ದು, ಮಾನವ ಆರೋಗ್ಯಕ್ಕೆ ಆ ವರದಿಗಳ ಪ್ರಸ್ತುತತೆಯನ್ನು ಅಂದಾಜು ಮಾಡಲು ಸಾಧ್ಯವಿಲ್ಲವೆಂದು ಪರಿಗಣಿಸಲಾಯಿತು. ೨೦೧೦ರ ನವೆಂಬರ್ ೨೫ರಂದು ಐರೋಪ್ಯ ಒಕ್ಕೂಟದ ಕಾರ್ಯನಿರ್ವಾಹಕ ಆಯೋಗವು ಉತ್ಪಾದನೆಯನ್ನು ರೊಳಗೆ ನಿಷೇಧಿಸುತ್ತದೆ ಮತ್ತು ಜೈವಿಕ ಸಂಯುಕ್ತ () ವನ್ನು ಹೊಂದಿರುವ ಪಾಲಿಕಾರ್ಬೊನೇಟ್ ಶಿಶು ಸೀಸೆಗಳ ಮಾರುಕಟ್ಟೆ ಮತ್ತು ಮಾರುಕಟ್ಟೆ ಸ್ಥಾಪನೆಯನ್ನು 1 2011ರೊಳಗೆ ನಿಷೇಧಿಸುತ್ತದೆಂದು ಆರೋಗ್ಯ ಮತ್ತು ಗ್ರಾಹಕ ನೀತಿ ಉಸ್ತುವಾರಿಯ ಆಯುಕ್ತ ಜಾನ್ ಡಾಲ್ಲಿ ತಿಳಿಸಿದ್ದಾರೆ. ಬಹುತೇಕ EUಸರ್ಕಾರಗಳಿಂದ ಇದು ಬೆಂಬಲಿತವಾಗಿದೆ. ಈ ನಿಷೇಧವನ್ನು ಮೆಡಿಕಲ್ ರೀಸರ್ಚ್ ಕೌನ್ಸಿಲ್‌ನ ಹ್ಯೂಮನ್ ರಿಪ್ರೊಡಕ್ಟಿವ್ ಸೈನ್ಸಸ್ ಯೂನಿಟ್ ಅತಿ ಪ್ರತಿಕ್ರಿಯೆಯೆಂದು ಕರೆದಿದ್ದಾರೆ. ಈ ಕ್ರಮವನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯಾಧಾರದ ಬಗ್ಗೆ ತಮಗೆ ತಿಳಿದಿಲ್ಲ ಮತ್ತು ವೈಜ್ಞಾನಿಕ ಆಧಾರಗಳಿಲ್ಲದೇ ರಾಜಕೀಯ ಆಧಾರಗಳಿಂದ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ==== ಡೆನ್ಮಾರ್ಕ್‌‌ ==== ೨೦೦೯ ಮೇನಲ್ಲಿ ಡೆನ್ಮಾರ್ಕ್ ಪಾರ್ಲಿಮೆಂಟ್ ಶಿಶುವಿನ ಸೀಸೆಗಳಲ್ಲಿ BPAಬಳಕೆಯನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿತು. ಅದು ೨೦೧೦ಏಪ್ರಿಲ್‌‍ನೊಳಗೆ ಜಾರಿಯಾಗಿರಲಿಲ್ಲ. ೨೦೧೦ಮಾರ್ಚ್‌ನಲ್ಲಿ ಆರೋಗ್ಯ ಸಚಿವರು ತಾತ್ಕಾಲಿಕ ನಿಷೇಧವನ್ನು ಘೋಷಿಸಿದರು. ==== ಬೆಲ್ಜಿಯಂ ==== ೨೦೧೦ ಮಾರ್ಚ್‌ನಲ್ಲಿ, ಸೆನೆಟ್ ಸದಸ್ಯ ಫಿಲಿಪ್ ಮಹೋಕ್ಸ್ ಆಹಾರ ಸಂಪರ್ಕದ ಪ್ಲಾಸ್ಟಿಕ್‌ಗಳಲ್ಲಿ BPAಯನ್ನು ನಿಷೇಧಿಸುವ ಶಾಸನವನ್ನು ಪ್ರಸ್ತಾಪಿಸಿದರು. ==== ಫ್ರಾನ್ಸ್‌‌ ==== ೨೦೧೦ ಫೆಬ್ರವರಿ ೫ರಂದು ಫ್ರೆಂಚ್ ಆಹಾರ ಸುರಕ್ಷತೆ ಏಜೆನ್ಸಿ () BPAನ ಆರೋಗ್ಯ ಅಪಾಯಗಳ ಹಿಂದಿನ ಅಂದಾಜುಗಳನ್ನು ಪ್ರಶ್ನಿಸಿದರು. ವಿಶೇಷವಾಗಿ ಇಲಿ ಮರಿಗಳಲ್ಲಿ ಗರ್ಭಕೋಶಕ್ಕೆ ಒಡ್ಡಿಕೆ ನಂತರ ಮತ್ತು ಹುಟ್ಟಿದ ಪ್ರಥಮ ತಿಂಗಳಿನಲ್ಲಿ ಗಮನಿಸಿದ ನಡವಳಿಕೆ ಪರಿಣಾಮಗಳಿಗೆ ಸಂಬಂಧಿಸಿದೆ. ೨೦೧೦ರ ಏಪ್ರಿಲ್‌ನಲ್ಲಿ BPAಅಂಶಗಳನ್ನು ಹೊಂದಿದ ಆಹಾರೋತ್ಪನ್ನಗಳಿಗೆ ಉತ್ತಮ ಲೇಬಲ್‌‌ಗಳನ್ನು ಅಳವಡಿಸಬೇಕೆಂದು AFFSAಸಲಹೆ ನೀಡಿತು. ೨೦೧೦ರ ಮಾರ್ಚ್ ೨೪ರಂದು ಶಿಶು ಆಹಾರದ ಸೀಸೆಗಳಿಂದ ಯನ್ನು ನಿಷೇಧಿಸಬೇಕೆಂಬ ಕಾನೂನಿನ ಪ್ರಸ್ತಾಪವನ್ನು ಫ್ರೆಂಚ್ ಸೆನೇಟ್ ಸರ್ವಾನುಮತದಿಂದ ಅಂಗೀಕರಿಸಿತು. ಪ್ರಸ್ತಾಪವು ಈಗಲೂ ಅಸೆಂಬ್ಲಿ ಅನುಮೋದನೆ ಮೇಲೆ ಅವಲಂಬಿತವಾಗಿದೆ. ==== ಜರ್ಮನಿ ==== ೨೦೦೮ರ ಸೆಪ್ಟೆಂಬರ್ ೧೯ರಂದು ಜರ್ಮನ್ ಫೆಡರಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸ್ಕ್ ಅಸೆಸ್‌ಮೆಂಟ್ ( für , )ಲ್ಯಾಂಗ್ ಅಧ್ಯಯನದ ಆಧಾರದ ಮೇಲೆ ಬಿಸ್ಫೆನಾಲ್ ಎ ಕುರಿತ ಅಪಾಯದ ಅಂದಾಜನ್ನು ಬದಲಾಯಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿಕೆ ನೀಡಿತು. ೨೦೦೯ ಅಕ್ಟೋಬರ್‌ನಲ್ಲಿ ಜರ್ಮನ್ ಪರಿಸರ ಸಂಘಟನೆ für ಮಕ್ಕಳ ಉತ್ಪನ್ನಗಳ ಕುರಿತು ನಿಷೇಧ ವಿಧಿಸಬೇಕೆಂದು ಮನವಿ ಮಾಡಿತು.ವಿಶೇಷವಾಗಿ ಉಪಶಾಮಕಗಳು ಮತ್ತು ಆಹಾರದ ಜತೆ ಸಂಪರ್ಕ ಹೊಂದುವ ಉತ್ಪನ್ನಗಳು. ಇದಕ್ಕೆ ಪ್ರತಿಕ್ರಿಯೆಯಾಗಿ ಕೆಲವು ಉತ್ಪಾದಕರು ಸ್ವಯಂಪ್ರೇರಣೆಯಿಂದ ಮಾರುಕಟ್ಟೆಯಿಂದ ಸಮಸ್ಯಾತ್ಮಕ ಉಪಶಾಮಕಗಳನ್ನು ತೆಗೆದರು. ==== ನೆದರ್ಲ್ಯಾಂಡ್ಸ್ ==== ೨೦೦೮ರ ನವೆಂಬರ್ ೬ರಂದು, ಡಚ್ ಆಹಾರ ಮತ್ತು ಗ್ರಾಹಕ ಉತ್ಪನ್ನ ರಕ್ಷಣೆ ಪ್ರಾಧಿಕಾರ, ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್‌ನಿಂದ ತಯಾರಿಸಿದ ಮಕ್ಕಳ ಸೀಸೆಗಳು ಬಿಸ್ಫೆನಾಲ್ ಎ ನ ಗಣನೀಯ ಸಾಂದ್ರೀಕರಣವನ್ನು ಬಿಡುಗಡೆ ಮಾಡುವುದಿಲ್ಲವಾದ್ದರಿಂದ ಬಳಕೆಗೆ ಸುರಕ್ಷಿತವಾಗಿದೆ ಎಂದು ಸುದ್ದಿಪತ್ರದಲ್ಲಿ ಹೇಳಿಕೆ ನೀಡಿತು. ==== ಸ್ವಿಟ್ಜರ್‌ಲೆಂಡ್‌ ==== ೨೦೦೯ರ ಫೆಬ್ರವರಿಯಲ್ಲಿ ಸಾರ್ವಜನಿಕ ಆರೋಗ್ಯದ ಸ್ವಿಸ್ ಫೆಡರಲ್ ಕಚೇರಿ, ಇತರ ಆರೋಗ್ಯ ಸಂಸ್ಥೆಗಳ ವರದಿಗಳ ಆಧಾರದ ಮೇಲೆ, ಆಹಾರದಿಂದ ಬಿಸ್ಫೆನಾಲ್ ಎ ಸೇವನೆಯು ನವಜಾತ ಶಿಶುಗಳಿಗೆ ಮತ್ತು ಹಸುಗೂಸುಗಳು ಸೇರಿದಂತೆ ಗ್ರಾಹಕನಿಗೆ ಯಾವುದೇ ಅಪಾಯ ಉಂಟುಮಾಡುವುದಿಲ್ಲ ಎಂದು ತಿಳಿಸಿತು. ಆದಾಗ್ಯೂ, ಅದೇ ಹೇಳಿಕೆಯಲ್ಲಿ ಪಾಲಿಕಾರ್ಬೊನೇಟ್ ಮಕ್ಕಳ ಸೀಸೆಗಳನ್ನು ಸೂಕ್ತವಾಗಿ ಬಳಸುವಂತೆ ಅದು ಸಲಹೆ ಮಾಡಿದ್ದು, ಪರ್ಯಾಯಗಳನ್ನು ಪಟ್ಟಿಮಾಡಲಾಗಿದೆ. ==== ಸ್ವೀಡನ್‌‌ ==== ೨೦೧೦ರ ಮೇನಲ್ಲಿ ಸ್ವೀಡಿಷ್ ಕೆಮಿಕಲ್ಸ್ ಏಜೆನ್ಸಿ ಮಕ್ಕಳ ಸೀಸೆಗಳಲ್ಲಿ ಗೆ ನಿಷೇಧ ಹೇರಬೇಕೆಂದು ಆದೇಶಿಸಿತು. ಆದರೆ ಸ್ವೀಡಿಷ್ ಆಹಾರ ಸುರಕ್ಷತೆ ಪ್ರಾಧಿಕಾರ ನಿರೀಕ್ಷಿತ ಐರೋಪ್ಯ ಆಹಾರ ಸುರಕ್ಷತೆ ಪ್ರಾಧಿಕಾರದ ಪರಿಷ್ಕೃತ ಪರಾಮರ್ಶೆಯನ್ನು ಕಾಯಲು ಆದ್ಯತೆ ನೀಡಿತು. ಪರಿಸರ ಸಚಿವ ಪರಾಮರ್ಶೆಗಾಗಿ ಕಾಯುವಂತೆಯೂ, ಆದರೆ ದೀರ್ಘಕಾಲ ಕಾಯಬೇಕಿಲ್ಲವೆಂದೂ ತಿಳಿಸಿತು. ==== ಯುನೈಟೆಡ್ ಕಿಂಗ್‌ಡಮ್ ==== ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾರಾಟ ಮಾಡುವ ಆಹಾರ ಸಂಪರ್ಕ ಉತ್ಪನ್ನಗಳಲ್ಲಿ ಯ ಬಳಕೆಯನ್ನು ಮುಕ್ತಾಯಗೊಳಿಸಿದ ಇತರ ಸರ್ಕಾರಗಳ ನಿಲುವಿಗೆ ಸಂಗತವಾಗುವ ದೃಷ್ಟಿಕೋನವನ್ನು ಸರ್ಕಾರ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಏಳು ವಿಜ್ಞಾನಿಗಳ ಸಮೂಹವು ಬರೆದ ಪತ್ರಕ್ಕೆ ೨೦೦೯ ಡಿಸೆಂಬರ್‌ನಲ್ಲಿ ಪ್ರತಿಕ್ರಿಯಿಸುತ್ತಾ, ಫುಡ್ ಸ್ಟಾಂಡರ್ಡ್ಸ್ ಏಜೆನ್ಸಿ ೨೦೦೯ ಜನವರಿಯಲ್ಲಿ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿತು. ‘ ಎಲ್ಲ ಮೂಲಗಳಿಂದ ಆಹಾರ ಸಂಪರ್ಕ ವಸ್ತುಗಳು ಸೇರಿದಂತೆ ಗೆ ಗ್ರಾಹಕರ ಒಡ್ಡಿಕೆಯು ಹಾನಿಕರ ಎಂದು ಪರಿಗಣಿಸಿದ ಮಟ್ಟಗಳಿಗಿಂತ ಕಡಿಮೆಯಿದೆ’ === ಜಪಾನ್‌‌ === ೧೯೮೮ ಮತ್ತು ೨೦೦೩ರ ನಡುವೆ, ಕ್ಯಾನಿಂಗ್ ಕೈಗಾರಿಕೆಯು ಸ್ವಯಂಪ್ರೇರಣೆಯಿಂದ ಅವುಗಳ ಅನೇಕ ಉತ್ಪನ್ನಗಳಲ್ಲಿ ಹೊಂದಿದ ಎಪಾಕ್ಸಿ ಕ್ಯಾನ್ ಲೈನರ್‌ಗಳನ್ನು -ಮುಕ್ತ ಪಾಲಿಎಥಿಲಿನ್ ಟೆರೆಪ್ತಲೇಟ್ ()ನಿಂದ ಬದಲಿಸಿತು. ಇತರ ಉತ್ಪನ್ನಗಳಿಗೆ,ಅವು ಭಿನ್ನ ಎಪಾಕ್ಸಿ ಲೈನಿಂಗ್‌ಗೆ ಬದಲಾದವು. ಇದರಿಂದ ಹಿಂದೆ ಬಳಸಿದ ರೆಸಿನ್‌ಗಿಂತ ಆಹಾರಕ್ಕೆ ಕಡಿಮೆ ಪ್ರಮಾಣದಲ್ಲಿ ಸ್ಥಳಾಂತರವಾಗುವ ಫಲಿತಾಂಶ ನೀಡಿತು. ಇದರ ಜತೆಗೆ, ಶಾಲೆಯ ಉಪಾಹಾರದಲ್ಲಿ ಪಾಲಿಕಾರ್ಬೊನೇಟ್ ಊಟದ ಮೇಜಿನ ಪರಿಕರದ ಬದಲಿಗೆ ಮುಕ್ತ ಪ್ಲಾಸ್ಟಿಕ್‌ಗಳಿಂದ ಬದಲಿಸಲಾಯಿತು. ಈ ಬದಲಾವಣೆಗಳ ಫಲವಾಗಿ,ಜಪಾನಿನ ಅಪಾಯ ಅಂದಾಜುಮಾಡುವವರು ಸಿದ್ಧಪಡಿಸಿದ ಆಹಾರಗಳು ಅಥವಾ ಪಾನೀಯಗಳಲ್ಲಿ ಅಕ್ಷರಶಃ ಯಾವುದೇ ಗುರುತಿಸಲಾಗಿಲ್ಲ ಮತ್ತು ಜನರಲ್ಲಿ ರಕ್ತದ ಪ್ರಮಾಣಗಳು ಗಣನೀಯವಾಗಿ ಕುಸಿಯಿತು (ಒಂದು ಅಧ್ಯಯನದಲ್ಲಿ ೫೦%). === ಅಮೆರಿಕಾ ಸಂಯುಕ್ತ ಸಂಸ್ಥಾನಗಳು === ==== ಸೆಪ್ಟೆಂಬರ್ ೨೦೦೮ ==== ಸೆಪ್ಟೆಂಬರ್‌ನಲ್ಲಿ ನ್ಯಾಷನಲ್ ಟಾಕ್ಸಿಕೋಲಜಿ ಪ್ರೋಗ್ರಾಂ ಬಿಸ್ಫೆನಾಲ್ ಎ ಕುರಿತು ತನ್ನ ವರದಿಯನ್ನು ಅಂತಿಮಗೊಳಿಸಿತು. ಹಸುಳೆಗಳು ರಾಸಾಯನಿಕಕ್ಕೆ ಒಡ್ಡಿಕೊಳ್ಳುವ ಅಪಾಯವನ್ನು ಹೊಂದಿರುವುದು, ಐದನೇ ಮಟ್ಟದ ಮಾಪಕದಲ್ಲಿ ಮಧ್ಯಬಿಂದುವಿನಿಂದ ಕೂಡಿದ್ದು, ಕಳವಳಕಾರಿ ಎಂದು ತಿಳಿಸಿತು. ಆ ಸಮಯದಲ್ಲಿ, ಗ್ರಾಹಕರಿಗೆ ಮರುಆಶ್ವಾಸನೆ ನೀಡುತ್ತಾ, ಪ್ರಸಕ್ತ ಮಿತಿಗಳು ಸುರಕ್ಷಿತವಾಗಿದ್ದು, ಈ ವಿಷಯದ ಪರಾಮರ್ಶೆಗೆ ತಜ್ಞರ ಹೊರ ಸಮಿತಿಯನ್ನು ಕರೆಯಿತು. ಲ್ಯಾಂಗ್ ಅಧ್ಯಯನನ್ನು ಆ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅಧ್ಯಯನದ ಸಹ-ಲೇಖಕ ಡೇವಿಡ್ ಮೆಲ್ಜರ್ ಸಮಿತಿಯ ಮುಂದೆ ಅಧ್ಯಯನದ ಫಲಿತಾಂಶಗಳನ್ನು ಮಂಡಿಸಿತು. ದಲ್ಲಿ ಲ್ಯಾಂಗ್ ಅಧ್ಯಯನದ ಪ್ರಕಟಣೆ ಜತೆಗೂಡಿದ ಸಂಪಾದಕೀಯವು ಬಿಸ್ಫೆನಾಲ್ ಎ ಕುರಿತ ಅಂದಾಜನ್ನು ಟೀಕಿಸಿದೆ. ಮೂಲಭೂತ ಸಮಸ್ಯೆಯೇನೆಂದರೆ ನ ಪ್ರಸಕ್ತ (ಸ್ವೀಕಾರಾರ್ಹ ದಿನನಿತ್ಯದ ಸೇವನೆ)ಯು ೧೯೮೦ರ ದಶಕದಲ್ಲಿ ಹಳತಾದ ವಿಧಾನಗಳನ್ನು ಬಳಸಿಕೊಂಡು ಮಾಡಿದ ಪ್ರಯೋಗಗಳನ್ನು ಆಧರಿಸಿದೆ.(ಅತ್ಯಂತ ಹೆಚ್ಚಿನ ಪ್ರಮಾಣಗಳನ್ನು ಪರೀಕ್ಷಿಸಲಾಯಿತು) ಮತ್ತು ಸೂಕ್ಷ್ಮವಲ್ಲದ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಸ್ವತಂತ್ರ ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಗಳನ್ನು ತಿರಸ್ಕರಿಸಿತು. ಏಕೆಂದರೆ ಈ ಶೋಧಕರು ಹಳತಾದ ಪರೀಕ್ಷೆ ಮಾರ್ಗದರ್ಶಿಗಳನ್ನು ಪರಿಸರ ರಾಸಾಯನಿಕಗಳಿಗೆ ಅನುಸರಿಸಲಿಲ್ಲ. ಆದರೆ ಹಳತಾದ, ಅಸೂಕ್ಷ್ಮ ವಿಶ್ಲೇಷಣೆಗಳಿಗೆ(ಪ್ರಬಲವಾಗಿ ರಾಸಾಯನಿಕ ಕೈಗಾರಿಕೆ ಆರ್ಥಿಕ ನೆರವು ನೀಡಿದ ಅಧ್ಯಯನಗಳನ್ನು ಒಳಗೊಂಡಿದೆ) ಹೆಚ್ಚು ತೂಕ ನೀಡಿ, ಪ್ರಸಕ್ತ ಒಡ್ಡಿಕೆ ಮಟ್ಟಗಳಲ್ಲಿ ಹಾನಿಕರವಲ್ಲ ಎಂದು ತೀರ್ಮಾನಕ್ಕೆ ಬರಲಾಯಿತು. ==== ಮಾರ್ಚ್‌ ೨೦೦೯ ==== ಗ್ಯಾಸೊಲೀನ್ ಮತ್ತು ರಾಸಾಯನಿಕಗಳ ಉತ್ಪಾದಕ ಸುನೊಕೊ, ೩ ವರ್ಷಕ್ಕಿಂತ ಕಿರಿಯರಾದ ಮಕ್ಕಳಿಗೆ ಆಹಾರ ಮತ್ತು ನೀರಿನ ಧಾರಕಗಳಲ್ಲಿ ಬಳಕೆ ಸಲುವಾಗಿ ಕಂಪೆನಿಗಳಿಗೆ ಮಾರಾಟ ಮಾಡಲು ಈಗ ನಿರಾಕರಿಸುತ್ತಿದ್ದು, ಸಂಯುಕ್ತದ ಸುರಕ್ಷತೆ ಬಗ್ಗೆ ಖಚಿತತೆ ಇಲ್ಲವೆಂದು ಹೇಳುತ್ತಿದೆ. ಸುನೊಕೊ ಮಕ್ಕಳ ಆಹಾರೋತ್ಪನ್ನಗಳಲ್ಲಿ ರಾಸಾಯನಿಕವನ್ನು ಬಳಸುವುದಿಲ್ಲ ಎಂದು ಗ್ರಾಹಕರು ಖಾತರಿ ನೀಡಬೇಕಾದ ಅಗತ್ಯದ ಬಗ್ಗೆ ಸುನೊಕೊ ಯೋಜಿಸಿದೆ. ಶಿಶುವಿನ ಸೀಸೆಗಳನ್ನು ವಾಣಿಜ್ಯೀಕರಿಸುವ ೬ ಅತೀದೊಡ್ಡ ಅಮೆರಿಕ ಕಂಪೆನಿಗಳು ಅವುಗಳ ಉತ್ಪನ್ನಗಳಲ್ಲಿ ಬಿಸ್ಫೆನಾಲ್ ಎ ಬಳಕೆಯನ್ನು ನಿಲ್ಲಿಸಲು ನಿರ್ಧರಿಸಿದವು. ನ್ಯೂಯಾರ್ಕ್‌ನ ಸುಫೋಲ್ಕ್ ಕೌಂಟಿ, ಬಿಸ್ಫೆನಾಲ್ ಎ ನಿಂದ ತಯಾರಾದ ಮಕ್ಕಳ ಪಾನೀಯದ ಧಾರಕಗಳನ್ನು ನಿಷೇಧಿಸಿತು. ಮಾರ್ಚ್ ೧೩ರಂದು ಹೌಸ್ ಮತ್ತು ಸೆನೇಟ್ ನಾಯಕರು ಬಿಸ್ಫೆನಾಲ್ ಎ ನಿಷೇಧಿಸುವ ಶಾಸನವನ್ನು ಪ್ರಸ್ತಾಪಿಸಿದರು. ಅದೇ ತಿಂಗಳಲ್ಲಿ, ೨೦೦೮ರ ಆಗಸ್ಟ್‌ನಲ್ಲಿ ಸುರಕ್ಷತೆ ಪ್ರತಿಪಾದಿಸಲು FDAಬಳಸಿದ ಎರಡು ಅಧ್ಯಯನಗಳ ಲೇಖಕ ರೊಚೆಲೆ ಟೈಲ್, ಆ ಅಧ್ಯಯನಗಳು ಸುರಕ್ಷಿತವೆಂದು ಪ್ರತಿಪಾದಿಸುವುದಿಲ್ಲ. ಏಕೆಂದರೆ, ರಾಸಾಯನಿಕಗಳ ಪರಿಣಾಮಗಳ ಎಲ್ಲ ಅಂಶಗಳನ್ನು ಒಳಗೊಳ್ಳಲು ಅವುಗಳನ್ನು ವಿನ್ಯಾಸಗೊಳಿಸಲಾಗಿಲ್ಲ ಎಂದು ತಿಳಿಸಿದರು. ==== ಮೇ ೨೦೦೯ ==== ಯನ್ನು ಸೀಮಿತಗೊಳಿಸುವ ಅಥವಾ ನಿಷೇಧಿಸುವ ನಿಬಂಧನೆಗಳನ್ನು ಅನುಮೋದಿಸುವ ಪ್ರಥಮ ಅಮೆರಿಕದ ನ್ಯಾಯಾಧಿಕಾರಗಳು ಮಿನ್ನೆಸೋಟ ಮತ್ತು ಚಿಕಾಗೊ. ಮಿನ್ನೆಸೋಟ ನಿಬಂಧನೆ ೨೦೧೦ರಲ್ಲಿ ಜಾರಿಗೆ ಬರುತ್ತದೆ. ಯನ್ನು ಹೊಂದಿದ ಮಕ್ಕಳ ಉತ್ಪನ್ನಗಳು ೨೦೧೦ರ ಜನವರಿ ೧ರ ನಂತರ ರಾಜ್ಯದಲ್ಲಿ ಮಾರಾಟ ಮಾಡದಿರಬಹುದು. ನಿಷೇಧವನ್ನು ಒಂದು ವರ್ಷದ ನಂತರ ಎಲ್ಲ ಚಿಲ್ಲರೆಮಾರಾಟಗಾರರಿಗೆ ವಿಸ್ತರಿಸಲಾಗುತ್ತದೆ." ಪರಿಣಾಮ ಉಂಟಾಗುವ ಉತ್ಪನ್ನಗಳನ್ನು ಸಿಪ್ಪಿ ಕಪ್ಸ್ ಮತ್ತು ಮಕ್ಕಳ ಸೀಸೆಗಳು ಎಂದು ಕರೆಯಲಾಗಿದೆ. ಚಿಕಾಗೊ ನಗರವು ಸ್ವಲ್ಪ ಕಾಲದ ನಂತರ ಇದೇ ರೀತಿಯ ನಿಷೇಧವನ್ನು ಅಳವಡಿಸಿಕೊಂಡಿತು. ಸುದ್ದಿಯಲ್ಲಿ ಚಿಕಾಗೊನ ನಿಷೇಧದ ಪ್ರಸಾರಕ್ಕೆ ಕೈಗಾರಿಕೆಯಿಂದ ಸತತ ವಿರೋಧ ವ್ಯಕ್ತವಾಯಿತು. ಚಿಕಾಗೊ ಟ್ರಿಬ್ಯೂನ್ ಲೇಖನ ಶಾಸನವನ್ನು ಅನುಮೋದಿಸುವಾಗ ತಾರಕಕ್ಕೇರಿದ ಸಮರವನ್ನು ಗಮನಿಸಿತು.ಕೈಗಾರಿಕೆ ಅಧಿಕಾರಿಗಳು ಈ ನಗರದ ಕ್ರಮವನ್ನು ನಿಲ್ಲಿಸಲು ಯತ್ನಿಸಿದಾಗ ಕೈಗಾರಿಕೆ ಅಧಿಕಾರಿಗಳು ನಿಲುವನ್ನು ಬಳಸಿಕೊಂಡರು." ೨೦೦೯ ಮೇನಲ್ಲಿ ವಾಷಿಂಗ್ಟನ್ ಪೋಸ್ಟ್ ಆಹಾರ ಮತ್ತು ಪಾನೀಯ ಧಾರಕರು ಮತ್ತು ಅವರ ಕೆಲವು ದೊಡ್ಡ ಗ್ರಾಹಕರು ಸರ್ಕಾರಿ ನಿಷೇಧಗಳನ್ನು ತಡೆಯಲು ಸಾರ್ವಜನಿಕ ಸಂಬಂಧಗಳು ಮತ್ತು ಲಾಬಿಯ ಕಾರ್ಯತಂತ್ರವನ್ನು ರೂಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿತು. ಟಿಪ್ಪಣಿ ಬಗ್ಗೆ ಅವರು ಟೀಕಿಸಿ, ರಾಸಾಯನಿಕದ ಬಗ್ಗೆ ೧೦೦ಕ್ಕೂ ಹೆಚ್ಚು ಸರ್ಕಾರಿ ವಿಜ್ಞಾನಿಗಳು ಮತ್ತು ವಿಶ್ವವಿದ್ಯಾನಿಲಯ ಪ್ರಯೋಗಾಲಯಗಳು ಆರೋಗ್ಯ ಕಳವಳಗಳನ್ನು ಎತ್ತಿದರೂ, ಎರಡು ಅಧ್ಯಯನಗಳ ಆಧಾರದ ಮೇಲೆ ಆಹಾರ ಮತ್ತು ಔಷಧಿ ಆಡಳಿತ ಅದನ್ನು ಸುರಕ್ಷಿತವೆಂದು ಪರಿಗಣಿಸಿತು. ಎರಡೂ ಅಧ್ಯಯನಗಳಿಗೆ ರಾಸಾಯನಿಕ ಕೈಗಾರಿಕೆಯ ವ್ಯಾಪಾರ ಸಮೂಹ ಆರ್ಥಿಕ ನೆರವು ನೀಡಿತು. ==== ಜೂನ್ ೨೦೦೯ ==== ೨೦೦೯ ಜೂನ್‌ನಲ್ಲಿ, ಸುರಕ್ಷತೆ ಮಟ್ಟಗಳನ್ನು ಮರುಪರಿಶೀಲಿಸುವ ನಿರ್ಧಾರವನ್ನು ಪ್ರಕಟಿಸಿತು. ಕನೆಕ್ಟಿಕಟ್ ಬಿಸ್ಪೆನಾಲ್ ಎಯನ್ನು ಶಿಶು ಆಹಾರ ಸೂತ್ರದಿಂದ ಮತ್ತು ಮಕ್ಕಳ ಆಹಾರ ಧಾರಕಗಳಿಂದ ಮತ್ತು ಯಾವುದೇ ಮರುಬಳಕೆಯ ಆಹಾರ ಅಥವಾ ಪಾನೀಯ ಧಾರಕದಿಂದ ನಿಷೇಧಿಸಿದ ಪ್ರಥಮ ಅಮೆರಿಕ ರಾಜ್ಯವಾಗಿದೆ. ==== ಜುಲೈ ೨೦೦೯ ==== ಕ್ಯಾಲಿಪೋರ್ನಿಯ ಎನ್‌ವೈರಾನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಡೆವಲಪ್‌ಮೆಂಟಲ್ ಎಂಡ್ ರಿಪ್ರೊಡಕ್ಟಿವ್ ಟಾಕ್ಸಿಕ್ಯಾಂಟ್ ಐಡೆಂಟಿಫಿಕೇಶನ್ ಕಮಿಟಿಯು ಬಿಸ್ಫೆನಾಲ್ ಎಯನ್ನು ಸಂತಾನೋತ್ಪತ್ತಿ ಹಾನಿ ಮಾಡುವುದೆಂದು ನಂಬಲಾದ ರಾಸಾಯನಿಕಗಳ ರಾಜ್ಯ ಪಟ್ಟಿಯಲ್ಲಿ ಇರಿಸುವುದರ ವಿರುದ್ಧ ಸರ್ವಾನುಮತದಿಂದ ಮತ ಚಲಾಯಿಸಿತು. ಸಮಿತಿಯು ಪ್ರಾಣಿಗಳಲ್ಲಿ ‌ನಸಂತಾನೋತ್ಪತ್ತಿ ಹಾನಿಯನ್ನು ತೋರಿಸುವ ವೈಜ್ಞಾನಿಕ ಸಂಶೋಧನೆಯ ಬಗ್ಗೆ ಸಮಿತಿಯು ಕಳವಳಪಟ್ಟರೂ, ಮಾನವರಲ್ಲಿ ಪರಿಣಾಮಗಳು ಉಂಟುಮಾಡುವ ಬಗ್ಗೆ ಸಾಕಷ್ಟು ಅಂಕಿಅಂಶಗಳಿಲ್ಲ ಎಂದು ಕಂಡುಕೊಂಡಿತು. ೨೦೦೬ರವರೆಗೆ, ಅದೇ ಸಮಿತಿಯು ಪರೋಕ್ಷ ಧೂಮಪಾನವನ್ನು ಪಟ್ಟಿಗೆ ಸೇರಿಸಲು ವಿಫಲವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕೇವಲ ಒಂದು ರಾಸಾಯನಿಕವನ್ನು ಮಾತ್ರ ಪಟ್ಟಿಗೆ ಸೇರಿಸಲಾಗಿದೆ ಎಂದು ಟೀಕಾಕಾರರು ಗಮನ ಸೆಳೆಯುತ್ತಾರೆ. ==== ಆಗಸ್ಟ್ ೨೦೦೯ ==== ಆಗಸ್ಟ್ ೩ರಂದು ಸಾರ್ವಜನಿಕ ಆರೋಗ್ಯದ ಮಸಾಚುಸೆಟ್ಸ್ ಇಲಾಖೆಯು ಮಕ್ಕಳಲ್ಲಿ ಸಂಭವನೀಯ ಆರೋಗ್ಯ ಪರಿಣಾಮ ತಪ್ಪಿಸಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ತಾಯಂದಿರಿಗೆ ಸಲಹೆ ಮಾಡಿತು. ಎರಡು ವರ್ಷ ವಯಸ್ಸಿನ ಮಕ್ಕಳುಳ್ಳ ತಾಯಂದಿರು ಯನ್ನು ಹೊಂದಿರಬಹುದಾದ ಉತ್ಪನ್ನಗಳನ್ನು ತಪ್ಪಿಸಲು ಮಿತಿ ವಿಧಿಸಬೇಕೆಂದು ಸಲಹೆ ಮಾಡಲಾಗಿದೆ. ಉದಾಹರಣೆಗೆ ೭ಅಥವಾ ೩ ಮರುಬಳಕೆ ಸಂಕೇತಗಳೊಂದಿಗೆ ಪ್ಲಾಸ್ಟಿಕ್ ಕುಡಿಯುವ ಸೀಸೆಗಳು ಮತ್ತು ಇತರೆ ಪ್ಲಾಸ್ಟಿಕ್ ವಸ್ತುಗಳು. ಮಿಲ್ವಾಕೀ ಜರ್ನಲ್ ಸೆಂಟಿನಲ್ ಕುರಿತು ಪ್ರಸಕ್ತ ತನಿಖಾ ಸರಣಿಗಳ ಭಾಗವಾಗಿ, ಉತ್ತೇಜನಕ್ಕೆ ಪ್ರಮುಖ ಸಾರ್ವಜನಿಕ ಸಂಬಂಧಗಳ ದಾಳಿಯನ್ನು ಕಾರ್ಯರೂಪಕ್ಕೆ ತರುವ ಪ್ಲಾಸ್ಟಿಕ್ಸ್ ಸೊಸೈಟಿ ಕೈಗಾರಿಕೆಯ ಯೋಜನೆಗಳನ್ನು ಬಹಿರಂಗಪಡಿಸಿತು. ಇದರಲ್ಲಿ ಮಾನೋಮರ್ ಮತ್ತು ಅದರ ಪರಿಣಾಮಗಳ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಅಥವಾ ವರದಿ ಮಾಡುವವರ ವಿರುದ್ಧ ದಾಳಿ ಮಾಡುವ ಅಥವಾ ಕೆಟ್ಟ ಹೆಸರು ತರುವ ಯೋಜನೆಗಳು ಸೇರಿದ್ದವು. ==== ಸೆಪ್ಟೆಂಬರ್ ೨೦೦೯ ==== ಸೆಪ್ಟೆಂಬರ್ ೨೯ರಲ್ಲಿ, .. ಪರಿಸರ ರಕ್ಷಣೆ ಏಜನ್ಸಿ ಮತ್ತು ಇತರೆ ಐದು ರಾಸಾಯನಿಕಗಳ ಅರ್ಹತೆಯನ್ನು ಕಾರ್ಯಯೋಜನೆ ಅಭಿವೃದ್ಧಿಗಾಗಿ ನಿರ್ಣಯಿಸುತ್ತಿರುವುದಾಗಿ ಪ್ರಕಟಿಸಿತು. ==== ಅಕ್ಟೋಬರ್ ೨೦೦೯ ==== ಅಕ್ಟೋಬರ್ ೨೮ರಂದು, $೩೦,೦೦೦,೦೦೦ ಹಣವನ್ನು ಸ್ಟಿಮ್ಯುಲಸ್ ಅನುದಾನಗಳಾಗಿ ಆರೋಗ್ಯ ಪರಿಣಾಮಗಳನ್ನು ಅಧ್ಯಯನ ಮಾಡುವ ಸಲುವಾಗಿ ಪ್ರಕಟಿಸಿತು. ಈ ಹಣವು ಅನೇಕ ಪರಿಣಿತರ ಪರಾಮರ್ಶೆ ಪ್ರಕಟಣೆಗಳ ಫಲಿತಾಂಶ ನೀಡುವುದೆಂದು ನಿರೀಕ್ಷಿಸಲಾಗಿತ್ತು. ==== ನವೆಂಬರ್ ೨೦೦೯ ==== ಗ್ರಾಹಕ ವರದಿಗಳ ನಿಯತಕಾಲಿಕ ಕೆಲವು ಸಿದ್ಧಪಡಿಸಿದ ಆಹಾರಗಳು ಮತ್ತು ಪಾನೀಯಗಳಲ್ಲಿ ಅಂಶದ ವಿಶ್ಲೇಷಣೆಯನ್ನು ಪ್ರಕಟಿಸಿತು. ನಿರ್ದಿಷ್ಟ ಪ್ರಕರಣಗಳಲ್ಲಿ ಆಹಾರದ ಒಂದು ಪೆಟ್ಟಿಗೆಯಲ್ಲಿರುವ ಪದಾರ್ಥವು ಪ್ರಸಕ್ತ ದಿನನಿತ್ಯದ ಸೇವನೆಯ ಸಂಚಿತ ಒಡ್ಡಿಕೆಯನ್ನು ಮೀರಿಸುವುದು ಸಾಧ್ಯವಿತ್ತು. ==== ಜನವರಿ, ೨೦೧೦ ==== ಜನವರಿ ೧೫ರಂದು ಆತಂಕಗಳ ಮಾಪನದಲ್ಲಿ ಮಧ್ಯಮ ಮಟ್ಟದ ಕಳವಳವನ್ನು ವ್ಯಕ್ತಪಡಿಸಿತು. ಭ್ರೂಣಗಳು, ಶಿಶುಗಳು ಮತ್ತು ಎಳೆಯ ಮಕ್ಕಳ ಮೆದುಳು, ನಡವಳಿಕೆ ಮತ್ತು ಪ್ರಾಸ್ಟೇಟ್ ಗ್ರಂಥಿಗಳಲ್ಲಿ BPAನ ಸಂಭವನೀಯ ಪರಿಣಾಮಗಳನ್ನು ಇದು ಕುರಿತದ್ದಾಗಿತ್ತು. ಆಹಾರ ಪೂರೈಕೆಯಲ್ಲಿ ಮಾನವ ಒಡ್ಡಿಕೆಯನ್ನು ತಗ್ಗಿಸಲು ಸಮಂಜಸ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಅದು ಪ್ರಕಟಿಸಿತು. ಆದಾಗ್ಯೂ, ಕುಟುಂಬಗಳು ಶಿಶು ಸೂತ್ರಗಳು ಅಥವಾ ಆಹಾರಗಳ ಬಳಕೆಯನ್ನು ಬದಲಿಸಬೇಕೆಂದು ಶಿಫಾರಸು ಮಾಡುತ್ತಿಲ್ಲ. ಉತ್ತಮ ಪೌಷ್ಠಿಕದ ಸ್ಥಿರ ಮೂಲದ ಅನುಕೂಲವು BPAನ ಸಂಭವನೀಯ ಅಪಾಯವನ್ನು ಮೀರಿಸುತ್ತದೆಂದು ಅದು ಪರಿಗಣಿಸುತ್ತದೆ. ಅದೇ ದಿನಾಂಕದಂದು ಆರೋಗ್ಯ ಮತ್ತು ಮಾನವ ಸೇವೆಗಳ ಅಮೆರಿಕ ಇಲಾಖೆಯು ಮಕ್ಕಳ ಯನ್ನು ತಗ್ಗಿಸುವುದಕ್ಕಾಗಿ ತಾಯಂದಿರಿಗೆ ನೆರವಾಗಲು ಮಾಹಿತಿಯನ್ನು ಬಿಡುಗಡೆ ಮಾಡಿತು. ==== ಫೆಬ್ರವರಿ ೨೦೧೦ ==== ನಿಷೇಧವನ್ನು ಬೆಂಬಲಿಸುವ ಮಿಲ್ವಾಕೀ ಜರ್ನಲ್ ಸೆಂಟಿನಲ್ ಪ್ರಕಾರ, ರಾಸಾಯನಿಕ ಕೈಗಾರಿಕೆಯ ಲಾಬಿದಾರರು ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿದ ನಂತರ, EPAಯು ನಿಬಂಧನೆಯನ್ನು ವಿಳಂಬಿಸಿತು ಮತ್ತು ೨೦೦೯ಡಿಸೆಂಬರ್ ೩೦ರಂದು ಬಿಡುಗಡೆ ಮಾಡಿದ ಕಾರ್ಯಯೋಜನೆಯಲ್ಲಿ ರಾಸಾಯನಿಕವನ್ನು ಸೇರಿಸಲಿಲ್ಲ. ಅನೇಕ ಅಮೆರಿಕ ರಾಜ್ಯಗಳು ಒಂದು ರೀತಿಯ BPAನಿಷೇಧವನ್ನು ಪರಿಗಣಿಸಿದವು. ==== ಮಾರ್ಚ್‌ ೨೦೧೦ ==== ಮಾರ್ಚ್ ೨೯ರಂದು, ಯು BPAಯನ್ನು "ಕಳವಳಕಾರಿ ರಾಸಾಯನಿಕ" ಎಂದು ಘೋಷಿಸಿತು. ==== ಏಪ್ರಿಲ್ ೨೦೧೦ ==== ಪ್ರೆಸಿಡೆಂಟ್ಸ್ ಕ್ಯಾನ್ಸರ್ ಪ್ಯಾನಲ್‌ನ ೨೦೦೮–೨೦೦೯ ವಾರ್ಷಿಕ ವರದಿಯು ಘೋಷಣೆ ಮಾಡಿತು: "ಅನೇಕ ಅರ್ಬುದಗಳ ದೀರ್ಘ ಅವ್ಯಕ್ತ ಅವಧಿಯ ಕಾರಣದಿಂದ, ಲಭ್ಯ ಸಾಕ್ಷ್ಯಾಧಾರವು ಈ ವೈವಿಧ್ಯ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ನಿಲುವನ್ನು ತಾಳುವಂತೆ ವಾದಿಸುತ್ತದೆ. ಇದರಲ್ಲಿ ಬಿಸ್ಫೆನಾಲ್ ಎ(...) ಒಳಗೊಂಡಿದೆ. ಏತನ್ಮಧ್ಯೆ, ಏಪ್ರಿಲ್‌ನಲ್ಲಿ ಜನರಲ್ ಮಿಲ್ಸ್ ಟೊಮೇಟೊಗಳ ಜತೆ ಕೂಡ ಕಾರ್ಯನಿರ್ವಹಿಸುವ ಮುಕ್ತ ಪರ್ಯಾಯ ಕ್ಯಾನ್ ಲೈನರ್ ಕಂಡುಹಿಡಿದಿರುವುದಾಗಿ ಪ್ರಕಟಿಸಿತು. ಇದು ಅತ್ಯಂತ ಆಮ್ಲೀಯ ಉತ್ಪನ್ನವಾಗಿದ್ದು, ಸೂಕ್ತ ಪರ್ಯಾಯಕ್ಕಾಗಿ ಹುಡುಕುವುದಕ್ಕೆ ಸಂಬಂಧಿಸಿದಂತೆ ಕೈಗಾರಿಕೆಯನ್ನು ಕಕ್ಕಾಬಿಕ್ಕಿಗೊಳಿಸಿತ್ತು. ಮುಂದಿನ ಟೊಮೆಟೊ ಬೆಳೆಯೊಂದಿಗೆ, ಸಾವಯವ ಆಹಾರ ಸಹಾಯಕ ಸಂಸ್ಥೆ ಮ್ಯೂರ್ ಗ್ಲೆನ್ ಮಾರಾಟ ಮಾಡುವ ಟೊಮೊಟೊ ಉತ್ಪನ್ನಗಳಲ್ಲಿ ಬಳಸಲು ಆರಂಭಿಸುವುದಾಗಿ ಅದು ಹೇಳಿದೆ. ಇತರ ಸಿದ್ಧಪಡಿಸಿದ ಯಾವುದೇ ಉತ್ಪನ್ನದಲ್ಲಿ ಜನರಲ್ ಮಿಲ್ಸ್ ಮುಕ್ತ ಪರ್ಯಾಯಗಳನ್ನು ಬಳಸುತ್ತಿದೆಯೇ ಎನ್ನುವ ಬಗ್ಗೆ ಯಾವುದೇ ಮಾತಿಲ್ಲ. ==== ಫೆಬ್ರವರಿ ೨೦೧೧ ==== ೨೦೧೦ರ ಆಗಸ್ಟ್‌ನಲ್ಲಿ, ಪರಿಸರ ರಕ್ಷಣೆಯ ಮೇನ್ ಬೋರ್ಡ್ ೨೦೧೨ ಜನವರಿಯಷ್ಟರೊಳಗೆ ಬಿಸ್ಫೆನಾಲ್ ಎ ನಿಂದ ತಯಾರಾದ ಮಕ್ಕಳ ಸೀಸೆಗಳು ಮತ್ತು ಇತರ ಮರುಬಳಕೆಯ ಆಹಾರ ಮತ್ತು ಪಾನೀಯ ಧಾರಕಗಳ ಮಾರಾಟ ನಿಷೇಧಕ್ಕೆ ಸರ್ವಾನುಮತದಿಂದ ಮತ ನೀಡಿತು. ೨೦೧೧ ಫೆಬ್ರವರಿಯಲ್ಲಿ ನೂತನವಾಗಿ ಆಯ್ಕೆಯಾದ ಮೇಯ್ನ್ ಗವರ್ನರ್ ಪಾಲ್ ಲೆಪೇಜ್ ಸ್ಥಳೀಯ ಟಿವಿ ಸುದ್ದಿಗಳ ಪ್ರದರ್ಶನದಲ್ಲಿ ಮಾತನಾಡುತ್ತಾ, ನಿಷೇಧವನ್ನು ರದ್ದುಮಾಡುವ ಬಗ್ಗೆ ಆಶಿಸುವುದಾಗಿ ಹೇಳಿದಾಗ ರಾಷ್ಟ್ರೀಯ ಮಾನ್ಯತೆ ಗಳಿಸಿದರು.ಸಮಸ್ಯೆಯಿದೆಯೆಂದು ಗುರುತಿಸುವ ಯಾವುದೇ ವಿಜ್ಞಾನವಿಲ್ಲ.ನನಗೆ ಕೇಳಿಬಂದ ಒಂದು ವಿಷಯವೆಂದರೆ, ನೀವು ಪ್ಲಾಸ್ಟಿಕ್ ಸೀಸೆ ತೆಗೆದುಕೊಂಡು ಮೈಕ್ರೋವೇವ್‌ನಲ್ಲಿ ಇರಿಸಿ ಬಿಸಿಮಾಡಿದಾಗ, ಈಸ್ಟ್ರೋಜನ್‌ ರೀತಿಯ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಿದರು. ಆದ್ದರಿಂದ ಕೆಲವು ಮಹಿಳೆಯರಲ್ಲಿ ಕೆಟ್ಟ ಪ್ರಕರಣವೆಂದರೆ ಸಣ್ಣ ಗಡ್ಡಗಳು ಬೆಳೆಯಬಹುದು ಎಂದು ಹೇಳಿದ್ದಾರೆ. == ಇವನ್ನೂ ಗಮನಿಸಿ‌ == ಆಹಾರ ಸಂಪರ್ಕ ವಸ್ತುಗಳು ಬಿಸ್ಫೆನಾಲ್ ಎ ಡಿಜ್ಲಿಸಿಡೈಲ್ ಎದರ್ () ಬಿಸ್ಫೆನಾಲ್ ಎF () ಥರ್ಮಲ್ ಪೇಪರ್ == ಉಲ್ಲೇಖಗಳು‌ == == ಬಾಹ್ಯ ಕೊಂಡಿಗಳು‌ == , (21 ). ": ". . 464 (7292): 1122–1124. :10.1038/4641122a. 20414285. 21 2010. {{ }}: : |= |= / |= () :10.2105/.2008.159228This . ಫ್ಲಾಸ್ಟಿಕ್ ನಾಟ್ ಫ್ಯಾಂಟಾಸ್ಟಿಕ್ ವಿತ್ ಬಿಸ್ಫೆನಾಲ್ ಎ (..) ಸ್ಟೇಟ್‌ಮಂಟ್ ಆನ್ ಬಿಸ್ಫೆನಾಲ್ ಎ ಫ್ರಂ 2008 11 2009 ವೇಬ್ಯಾಕ್ ಮೆಷಿನ್ ನಲ್ಲಿ. , (ಮಾರ್ಚ್ 2009). " : ". . 17 (3): 309–315. :10.1289/.0800173. 2661896. 19337501. {{ }}: |= (|= ) () ಹಜ್ಯಾರ್ಡ್ ಇನ್ ಎ ಬಾಟಲ್ ಕ್ಯಾಲಿಫೋರ್ನಿಯದಲ್ಲಿ ಯನ್ನು ನಿಯಂತ್ರಿಸುವ ಪ್ರಯತ್ನವು ಸೋಲಪ್ಪಿತು( ದಿ ಎಕಾನಾಮಿಸ್ಟ್‌ ನಿಂದ) ಬಿಸ್ಫೆನಾಲ್- ನ್ಯೂಸ್ & ಪ್ರಾಡಕ್ಟ್ಸ್ 12 2008 . ಹೊಂದಿರುವ ಉತ್ಪನ್ನಗಳನ್ನು ಕುರಿತು ಸುದ್ದಿ ವಿವರಣೆ. :10.1016/..2009.06.014This . ಹೌ ಟು ಪ್ರೊಟೆಕ್ಟ್ ಯುವರ್ ಬೇಬಿ ಫ್ರಂ (ಬಿಸ್ಫೆನಾಲ್ ಎ) 22 2011 ವೇಬ್ಯಾಕ್ ಮೆಷಿನ್ ನಲ್ಲಿ. , (23 ಫೆಬ್ರವರಿ 2010). " .. ". . 23 ಫೆಬ್ರವರಿ 2010. " ". 23 ಸೆಪ್ಟೆಂಬರ್ 2010. ಚೆಂಸಬ್ ಆನ್‌ಲೈನ್ : ಬಿಸ್ಫೆನಾಲ್ ಎ.